ಚಮಕ್ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಗಣೇಶ್-ರಶ್ಮಿಕಾ ಜೊತೆ ದೀಪಾವಳಿ ಆಚರಿಸಲು ಯುವಜನತೆಗೆ ನಿರ್ದೇಶಕ ಸುನಿ ಆಹ್ವಾನ

ಹೋಳಿ ಫೈಟಿಂಗ್ ಸೀನ್ ಜೊತೆ ಚಮಕ್ ಚಿತ್ರದ ಕ್ಲೈಮ್ಯಾಕ್ಸ್ ಮುಗಿಸಲು ನಿರ್ದೇಶಕ ಸುನಿ ನಿರ್ದರಿಸಿದ್ದಾರೆ. ಈ ಶೂಟಿಂಗ್ ನಲ್ಲಿ ಸಾರ್ವಜನಿಕರನ್ನು..

ಬೆಂಗಳೂರು: ಹೋಳಿ ಫೈಟಿಂಗ್ ಸೀನ್ ಜೊತೆ ಚಮಕ್ ಚಿತ್ರದ ಕ್ಲೈಮ್ಯಾಕ್ಸ್ ಮುಗಿಸಲು ನಿರ್ದೇಶಕ ಸುನಿ ನಿರ್ದರಿಸಿದ್ದಾರೆ. ಈ ಶೂಟಿಂಗ್ ನಲ್ಲಿ ಸಾರ್ವಜನಿಕರನ್ನು ಸೇರಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ. 
ಫೈಟಿಂಗ್ ದೃಶ್ಯವನ್ನು ಆಚಾರ್ಯ ಇನ್ಸ್ ಸ್ಟಿಟ್ಯೂಟ್ ನಲ್ಲಿ ನಡೆಸಲು ಯೋಜಿಸಲಾಗಿತ್ತು, ಆದರೆ ಹಲವು ಕಾರಣಗಳಿಂದ ಶೂಟಿಂಗ್ ಮುಂದೂಡಲಾಗಿದೆ. ಹೀಗಾಗಿ ಅಕ್ಟೋಬರ್ 19 ರಿಂದ 21ರ ವರೆಗೆ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೆಯಲಿದೆ.
ವಿಭಿನ್ನ ಅನುಭವ ಹೊಂದಿರುವ ಆಸಕ್ತಿ ಇರುವ ಯುವ ಜನತೆಗೆ ನಿರ್ದೇಶಕ ಸುನಿ ಆಹ್ವಾನ ನೀಡಿದ್ದಾರೆ. ಆಸಕ್ತಿ ಇರುವವರು ಚಾಮರಾಜಪೇಟೆಯ ಡೀರ್ ಪಾರ್ಕ್ ಎದುರಿರುವ ರಾಜೀವ್ ಗಾಂಧಿ ಸಭಾಂಗಣಕ್ಕೆ ಬರಲು ಆಹ್ವಾನ ನೀಡಿದ್ದಾರೆ,. ಭಾಗವಹಿಸುವವರಿಗೆ ಹೆಚ್ಚಿನ ರೀತಿಯ ತಮಾಷೆ ಹಾಗೂ ಮೋಜು ಇರಲಿದೆ, ನಮ್ಮ ಕಡೆಯಿಂದ ಉಡುಗೊರೆ ನೀಡಲಾಗುವುದು ಎಂದು ಹೇಳಿದ್ದಾರೆ.
ಫೈಟಿಂಗ್ ದೃಶ್ಯದೊಂದಿಗೆ ಚಮಕ್ ಸಿನಿಮಾ ಶೂಟಿಂಗ್ ಮುಕ್ತಾಯಗೊಳ್ಳಲಿದೆ. ಸುನಿ ನಿರ್ದೇಶನದ ಈ ಸಿನಿಮಾದಲ್ಲಿ, ಗಣೇಶ್, ರಶ್ಮಿಕಾ ಮಂದಣ್ಣ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಸಾಧುಕೋಕಿಲಾ, ನಿರ್ದೇಶಕರುಗಳಾದ ಗಿರಿ ಮತ್ತು  ರಘುರಾಂ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!