ಹರಿಪ್ರಿಯಾ-ಸುಮಲತಾ 
ಸಿನಿಮಾ ಸುದ್ದಿ

ಹರಿಪ್ರಿಯಾ 25ನೇ ಚಿತ್ರಕ್ಕೆ ಸತ್ಯ ಘಟನೆ ಆಧಾರಿತ

ನಟಿ ಹರಿಪ್ರಿಯಾರ 25ನೇ ಚಿತ್ರಕ್ಕೆ ಡಾಟರ್ ಆಫ್ ಪಾರ್ವತಮ್ಮ ಎಂದು ಹೆಸರಡಲಾಗಿದೆ. ಇಲ್ಲಿ ಅವರು ಹಿರಿಯ...

ನಟಿ ಹರಿಪ್ರಿಯಾರ 25ನೇ ಚಿತ್ರಕ್ಕೆ ಡಾಟರ್ ಆಫ್ ಪಾರ್ವತಮ್ಮ ಎಂದು ಹೆಸರಡಲಾಗಿದೆ. ಇಲ್ಲಿ ಅವರು ಹಿರಿಯ ನಟಿ ಸುಮಲತಾರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ನಿನ್ನೆ ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಗಿತ್ತು. ಚಿತ್ರದ ಶೂಟಿಂಗ್ ಆರಂಭಗೊಂಡು ಈಗಾಗಲೇ 10 ದಿನಗಳು ಕಳೆದಿವೆ.

ಚಿತ್ರಕ್ಕೆ ಕಥೆ ಬರೆದಿರುವ ಜೆ.ಶಂಕರ್ ಗೆ ಇದು ಮೊದಲ ಚಿತ್ರ. ತನಿಖಾಧಿಕಾರಿ ವೈದೇಹಿ ಪಾತ್ರವನ್ನು ಹರಿಪ್ರಿಯಾ ನಿರ್ವಹಿಸುತ್ತಿದ್ದು 2017ರಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರ ಇದಾಗಿದೆ.

ಇಲ್ಲಿ ಪಾರ್ವತಮ್ಮ ಪಾತ್ರವನ್ನು ಸುಮಲತಾ ಮಾಡುತ್ತಿದ್ದಾರೆ. ಇಲ್ಲಿ ಬರುವ ಪಾರ್ವತಮ್ಮನಿಗೂ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಪತ್ನಿ ನಿರ್ಮಾಪಕಿ ದಿವಂಗತ ಪಾರ್ವತಮ್ಮನಿಗೂ ಯಾವುದೇ ಸಂಬಂಧವಿಲ್ಲ. ಊರ್ವಿ ಚಿತ್ರದಲ್ಲಿ ಅಭಿನಯಿಸಿದ್ದ ಪ್ರಭು ಕೂಡ ಈ ಚಿತ್ರದಲ್ಲಿ ಇರಲಿದ್ದಾರೆ. ಹಾಸ್ಯನಟ ವಿಶ್ವ ಜೊತೆ ಅವರದ್ದು ಕೂಡ ಪ್ರಮುಖ ಪಾತ್ರವಿದೆ.

ಡಾಟರ್ ಆಫ್ ಪಾರ್ವತಮ್ಮ ಚಿತ್ರಕ್ಕೆ ನಾಲ್ವರು ನಿರ್ಮಾಪಕರು ಹಣ ಹೂಡಿದ್ದಾರೆ. ಮಿಧುನ್ ಮುಕುಂದನ್ ಅವರ ಸಂಗೀತ ಮತ್ತು ಅರುಲ್ ಕೆ ಸೋಮಸುಂದರಂ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!