ಸಿನಿಮಾ ಸುದ್ದಿ

ನಟಿ ಅನುಪ್ರಭಾಕರ್ ಗೆ ಹೆಣ್ಣು ಮಗು ಜನನ

Raghavendra Adiga
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಹೆಣ್ಣು ಮಗುವಿನ ತಾಯಿ ಯಾಗಿದ್ದಾರೆ.ಈ ಮೂಲಕ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ.
ಸ್ವಾತಂತ್ರ್ಯದಿನದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿರುವದನ್ನು ಆಕೆಯ ಪತಿ ರಘು ಮುಖರ್ಜಿ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ಅವರು ತಮ್ಮ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ 
ಸಧ್ಯ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು ಶುಭ ಹಾರೈಸಿದ ಎಲ್ಲರಿಗೆ ಧನ್ಯವಾದ ಎಂದು ರಘು ಬರೆದಿದ್ದಾರೆ.
ಏಪ್ರಿಲ್ 25, 2016ರಲ್ಲಿ ನಟ ಹಾಗೂ ಮಾಡೆಲ್ ಆಗಿದ್ದ ರಘು ಮುಖರ್ಜಿ ಹಾಗೂ ಅನುಪ್ರಭಾಕರ್ ವಿವಾಹವಾಗಿದ್ದು ಇಬ್ಬರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ವಿವಾಹ ಕಾರ್ಯಕ್ರಮ ನಡೆದಿತ್ತು.
SCROLL FOR NEXT