ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ 
ಸಿನಿಮಾ ಸುದ್ದಿ

ಜಯಲಲಿತಾ ಜೀವನಚರಿತ್ರೆ ಸಿನಿಮಾ ಮೂರು ಭಾಷೆಗಳಲ್ಲಿ ನಿರ್ಮಾಣ; ವಿಜಯ್ ನಿರ್ದೇಶನ

ಎಐಎಡಿಎಂಕೆ ನಾಯಕಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಜೀವನ ...

ಚೆನ್ನೈ: ಎಐಎಡಿಎಂಕೆ ನಾಯಕಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಜೀವನ ಚರಿತ್ರೆಯ ಸಿನಿಮಾ ತಯಾರಾಗಲಿದ್ದು ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿದೆ.

83 ಮತ್ತು ಎನ್ ಟಿ ರಾಮರಾವ್ ಜೀವನಚರಿತ್ರೆ ನಿರ್ಮಿಸಿದ್ದ ವಿಬ್ರಿ ಮೀಡಿಯಾ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಲಿದ್ದು ಮುಂದಿನ ವರ್ಷ ಜಯಲಲಿತಾ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ಸೆಟ್ಟೇರಲಿದೆ.

ಸ್ಥಳೀಯ ಮಟ್ಟದ ನಾಯಕಿಯಾಗಿ ಇಡೀ ರಾಷ್ಟ್ರದಲ್ಲಿ ಗಮನ ಸೆಳೆದ ಡಾ ಜೆ ಜಯಲಲಿತಾ ಭಾರತೀಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿ. ಅವರ ಜೀವನ ಮಹಿಳಾ ಸಮೂಹಕ್ಕೆ ಒಂದು ಸ್ಪೂರ್ತಿ ಎಂದರು. ಸಿನಿಮಾ ಮತ್ತು ರಾಜಕೀಯದಲ್ಲಿ ಅವರ ಸಾಧನೆಗಳಿಗೆ ಈ ಸಿನಿಮಾ ಅರ್ಪಣೆ ಎಂದರು.

ಫೆಬ್ರವರಿ 24ರಂದು ಅವರ ಹುಟ್ಟುಹಬ್ಬದ ದಿನ ಚಿತ್ರದ ಟೀಸರ್ ಮತ್ತು ಮುಹೂರ್ತ ನೆರವೇರಲಿದೆ ಎಂದು ವಿಬ್ರಿ ಮೀಡಿಯಾ ನಿರ್ದೇಶಕಿ ಬ್ರಿಂದಾ ಪ್ರಸಾದ್ ಅಡುಸುಮಿಲ್ಲಿ ತಿಳಿಸಿದರು. ಪ್ರಶಸ್ತಿ ವಿಜೇತ ನಿರ್ದೇಶಕ ಮದ್ರಾಸಪಟ್ಟಿಣಂ ಸಿನಿಮಾ ಖ್ಯಾತಿಯ ವಿಜಯ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದ ಕಲಾವಿದರನ್ನು ಇಟ್ಟುಕೊಂಡು ಚಿತ್ರ ತಯಾರಿಸಲಾಗುತ್ತದೆ. ಜಯಲಲಿತಾ ಜೀವನಚರಿತ್ರೆ ಸಿನಿಮಾ 2019ರಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel