ಪ್ರಜ್ವಲ್ ದೇವರಾಜ್ 
ಸಿನಿಮಾ ಸುದ್ದಿ

ರುದಿರ ಚಿತ್ರದಲ್ಲಿ ನಕ್ಸಲ್ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್!

ನವ ನಿರ್ದೇಶಕ ಫಣೀಶ್ ನಿರ್ದೇಶನದ ರುದಿರ ಚಿತ್ರದಲ್ಲಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಕ್ಸಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಫಣೀಶ್ ನಿರ್ದೇಶನದ ರುದಿರ ಚಿತ್ರದಲ್ಲಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಕ್ಸಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
ರುದಿರ ಅಂದರೆ ರಕ್ತ ಎಂದರ್ಥ. ಇನ್ನು ನಕ್ಸಲ್ ಚಳವಳಿಯ ಛಾಯೆಯೂ ಈ ಚಿತ್ರದಲ್ಲಿದೆ. ಈಗ ಎಡಪಂಥ ಹಾಗೂ ಬಲಪಂಥ ಎಂದು ವಿಭಾಗಿಸಿಕೊಂಡು ಜಗಳ ಜೋರು ನಡೆಯುತ್ತಿದೆ. ಯಾವ ಐಡಿಯಾಲಜಿಗಳೂ ಶಾಶ್ವತ ಅಲ್ಲ. ಒಂದು ಕಾಲಕ್ಕೆ ಪ್ರಸ್ತುತವಾಗಿದ್ದ ಐಡಿಯಾಲಜಿ ಮುಂದೆ ಅಪ್ರಸ್ತುತ ಆಗಬಹುದು ಎಂಬುದನ್ನೇ ಈ ಚಿತ್ರದಲ್ಲಿ ನಿರ್ದೇಶಕರು ಹೇಳ ಹೊರಟಿದ್ದಾರೆ. 
ಈ ಹಿಂದೆ ರುದಿರ ಚಿತ್ರದಲ್ಲಿ ವಸಿಷ್ಠ ಸಿಂಹ ನಾಯಕನಾಗಿ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಚಿತ್ರ ನಿಂತು ಹೋಗಿತ್ತು. ಇದೀಗ ಪ್ರಜ್ವಲ್ ದೇವರಾಜ್ ನಟನೆಯಲ್ಲಿ ನಿರ್ಮಾಣವಾಗುತ್ತಿದೆ. 
ಪ್ರಜ್ವಲ್ ದೇವರಾಜ್ ಅವರ ಇಮೇಜ್ ಮತ್ತು ಅವರ ಮ್ಯಾನರಿಸಂಗಳನ್ನು ಗಮನದಲ್ಲಿಟ್ಟುಕೊಂಡು ಫಣೀಶ್ ಈ ಚಿತ್ರದ ಸ್ಕ್ರಿಪ್ಟ್ ನಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ನಿರ್ದೇಶಕರೇ ಭಾಗ್ಯತನಯ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಧೆ ಆರಂಭಿಸಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 
ಇನ್ನು ಸಂತೆಯಲ್ಲಿ ನಿಂತ ಕಬೀರ ಚಿತ್ರದಲ್ಲಿ ನಟಿಸಿದ್ದ ಸುಹಾನ ಸಂತೋಷ್ ಪ್ರಜ್ವಲ್ ಗೆ ಜೋಡಿಯಾಗಿ ಅಭಿನಯಿಸುವ ಸಾಧ್ಯತೆ ಇದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT