ಜಾಗತಿಕ ಮಟ್ಟದಲ್ಲಿ ಗಲಿ ಗಲಿ ಹಾಡು ವೈರಲ್: ಕೆಜಿಎಫ್ ಹಾಡಿನಿಂದ ಯಶ್ ಗೆ ಜಗದ್ವಿಖ್ಯಾತಿ! 
ಸಿನಿಮಾ ಸುದ್ದಿ

ಜಾಗತಿಕ ಮಟ್ಟದಲ್ಲಿ ಗಲಿ ಗಲಿ ಹಾಡು ವೈರಲ್: ಕೆಜಿಎಫ್ ಹಾಡಿನಿಂದ ಯಶ್ ಗೆ ಜಗದ್ವಿಖ್ಯಾತಿ!

ಬಹುಭಾಷಾ ಸಿನಿಮಾ ಕೆಜಿಎಫ್ ಹಲವು ಕಾರಣಗಳಿಗಾಗಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಪೈಕಿ ಈಗ ಸದ್ದು ಮಾಡುತ್ತಿರುವ ಸುದ್ದಿ ಗಲಿ ಗಲಿ ಹಾಡಿನ ಕುರಿತಾದದ್ದು.

ಬೆಂಗಳೂರು: ಬಹುಭಾಷಾ ಸಿನಿಮಾ ಕೆಜಿಎಫ್ ಹಲವು ಕಾರಣಗಳಿಗಾಗಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಪೈಕಿ ಈಗ ಸದ್ದು ಮಾಡುತ್ತಿರುವ ಸುದ್ದಿ ಗಲಿ ಗಲಿ ಹಾಡಿನ ಕುರಿತಾದದ್ದು. 
ಗಲಿ ಗಲಿ ಹಾಡು ಬಿಡುಗಡೆಯಾಗಿ 24 ಗಂಟೆಯಲ್ಲೇ ಅತೀ ಹೆಚ್ಚು ವೀಕ್ಷಣೆ ಪಡೆದು ನಂಬರ್ 1 ಸ್ಥಾನದಲ್ಲಿತ್ತು. ಈ ಬೆನ್ನಲ್ಲೇ ಈ ಹಾಡಿಗೆ ಮತ್ತೊಂದು ಗರಿ ಮುಡಿಗೇರಿದ್ದು, ಜಾಗತಿಕ ಮಟ್ಟದಲ್ಲಿ ಗಲಿ ಗಲಿ ಹಾಡನ್ನು ಕೇಳಿಸಿಕೊಂಡವರು ಯಶ್ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿದ್ದಾರೆ.  ಗಲಿ ಗಲಿ ಹಾಡನ್ನು ಕೇಳಿಸಿಕೊಂಡಿರುವ ಬೇರೆ ಬೇರೆ ದೇಶಗಳ ಜನರೂ ಸಹ ಹಾಡನ್ನು ಮೆಚ್ಚಿಕೊಂಡಿದ್ದು, ಯಶ್ ಬಗ್ಗೆ ತಿಳಿದುಕೊಳ್ಳುವುದಕ್ಕೆ ಪ್ರಾರಂಭಿಸಿದ್ದಾರೆ. 
ಆಸ್ಟ್ರೇಲಿಯಾದಲ್ಲಿರುವ ಪಾಕಿಸ್ತಾನ ಪ್ರಜೆ ಅಸ್ಸಾದ್ ಅರ್ಮಾನಿ ಯೂಟ್ಯೂಬ್ ನಲ್ಲಿ ಗಲಿ ಗಲಿ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಾಡನ್ನು ಮೆಚ್ಚಿಕೊಂಡಿದ್ದೇನೆ, ಈ ಹಾಡನ್ನು ನೋಡಿದ ನಂತರ ಯಶ್ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.  ಇನ್ನು ಜಪಾನ್ ನಲ್ಲೂ ಸಹ ಯಶ್ ಅಭಿನಯದ ಗಲಿ ಗಲಿ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ. 
ಗಲಿ ಗಲಿ ಹಾಡಿಗೆ ಹೆಜ್ಜೆ ಹಾಕಿದ ನಂತರ ಹಾಡುಗಳಲ್ಲಿ ನೃತ್ಯ ಮಾಡುವ ಭಾಗದ ಚಿತ್ರೀಕರಣಕ್ಕಾಗಿ ತಮಗೆ ಹೆಚ್ಚು  ಅವಕಾಶಗಳು ಸಿಗುತ್ತಿವೆ ಎಂದು ಮೌನಿ ರಾಯ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel