ಡಾ.ನಾಗೇಂದ್ರ ಪ್ರಸಾದ್ 
ಸಿನಿಮಾ ಸುದ್ದಿ

'ಗೂಗಲ್'ನಲ್ಲಿ ಡಾ.ನಾಗೇಂದ್ರ ಪ್ರಸಾದ್ ರ ಒನ್ ಮ್ಯಾನ್ ಶೋ

ತಮ್ಮ ಮುಂದಿನ ಚಿತ್ರ ಗೂಗಲ್ ನಲ್ಲಿ ಡಾ.ನಾಗೇಂದ್ರ ಪ್ರಸಾದ್ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ...

ತಮ್ಮ ಮುಂದಿನ ಚಿತ್ರ ಗೂಗಲ್ ನಲ್ಲಿ ಡಾ.ನಾಗೇಂದ್ರ ಪ್ರಸಾದ್ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಗೂಗುಲ್ ಎಂಬ ಶಬ್ದಕ್ಕೆ ಕನ್ನಡದಲ್ಲಿ ಟ್ವಿಸ್ಟ್ ನೀಡಿ ಗೂಗಲ್ ಮಾಡಿದ್ದಾರೆ. ಇದಕ್ಕೆ ಒನ್ ಮ್ಯಾನ್ ಶೋ ರೀತಿಯಲ್ಲಿ ಕೆಲಸ ಮಾಡಿದ್ದಾರೆ.

ತಮ್ಮ ನಿರ್ಮಾಣ ಸಂಸ್ಥೆ ಉತ್ಸವ ಮೂವೀಸ್ ನಡಿ ಸಿನಿಮಾ ನಿರ್ಮಿಸಿರುವ ನಾಗೇಂದ್ರ ಪ್ರಸಾದ್ ಚಿತ್ರದ ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ  ಮತ್ತು ಛಾಯಾಗ್ರಹಣ ಕೆಲಸಗಳೆಲ್ಲವನ್ನು ತಾವೇ ನಿರ್ವಹಿಸಿದ್ದಾರೆ.

ಹೀರೋ ಮತ್ತು ಹೀರೋಯಿನ್ ಸುತ್ತ ಸುತ್ತುವ ಕಥೆ ಗೂಗಲ್ ಆಗಿರದೆ, ಚಿತ್ರದಲ್ಲಿ ಏಳೆಂಟು ಪಾತ್ರಗಳ ಸುತ್ತ ಕಥೆ ಹೆಣೆಯಲಾಗಿದೆ. ಯಾವುದೇ ಇಮೇಜ್ ಇಲ್ಲದ ಪ್ರಮುಖ ಪಾತ್ರ ಚಿತ್ರಕ್ಕೆ ಬೇಕಾಗಿತ್ತು. ಹೀಗಾಗಿ ಈ ಚಿತ್ರ ಮಾಡಿದೆ ಎನ್ನುತ್ತಾರೆ.

ನಾಗೇಂದ್ರ ಪ್ರಸಾದ್ ಅವರ ಜೊತೆಗೆ ಚಿತ್ರದಲ್ಲಿ ಶುಭಾ ಪೂಂಜ, ಅಮೃತಾ ರಾವ್, ಹೊಸಬರಾದ ದೀಪಕ್, ಶೋಭರಾಜ್, ಮುನಿ, ಸಂಪತ್ ಜೈದೇವ್ ಮತ್ತು ಬೇಬಿ ವೈಷ್ಣವಿ ನಟಿಸಿದ್ದಾರೆ.

ನಿಮ್ಮನ್ನು ನೀವು ಕಂಡುಕೊಳ್ಳುವುದೇ ಗೂಗಲ್ ಕಥೆಯ ಜೀವಾಳ. ಗೂಗಲ್ ಎಂಬ ಖ್ಯಾತ ಸರ್ಚ್ ಎಂಜಿನ್ ಇಡೀ ವಿಶ್ವವನ್ನು ನಿಮ್ಮ ಕೈಯಲ್ಲಿಯೇ ಪಡೆಯಬಹುದು. ರೈತರಿಂದ ಹಿಡಿದು ಕಾರ್ಪೊರೇಟ್ ಜಗತ್ತಿನವರೆಗೆ ಎಲ್ಲರೂ ಮಾಹಿತಿಗಾಗಿ ಗೂಗಲ್ ನ್ನು ಅವಲಂಬಿಸಿಕೊಂಡಿರುತ್ತಾರೆ. ಆದರೆ ಮನುಷ್ಯನ ಮನಸ್ಸಿನಲ್ಲಿ ಏನು ನಡೆಯುತ್ತಿದೆ, ಅವನ ಹೃದಯ ಏನು ಹೇಳುತ್ತಿದೆ ಎಂದು ತಿಳಿದುಕೊಳ್ಳುವುದು ಕಷ್ಟ. ಈ ಚಿತ್ರ ಮನುಷ್ಯನ ಮನಸ್ಸು, ಭಾವನೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತದೆ. ಯಾರೋ ನಿಮ್ಮ ಮನಸ್ಸನ್ನು ಗೂಗಲ್ ಮಾಡಲು ಯತ್ನಿಸಿದರೆ ಏನಾಗುತ್ತದೆ ಎಂಬುದು ಚಿತ್ರದ ಕಥೆಯಾಗಿದೆ ಎನ್ನುತ್ತಾರೆ ನಾಗೇಂದ್ರ ಪ್ರಸಾದ್.

ನಾಗಾರ್ಜುನ ಅವರ ಸಂಗೀತ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!