ಮನೋಜ್ 
ಸಿನಿಮಾ ಸುದ್ದಿ

ಮನೋಜ್ ಅಭಿನಯದ 'ಟಕ್ಕರ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ರಘು ಶಾಸ್ತ್ರಿ

ರನ್ ಆ್ಯಂಟನಿ ಚಿತ್ರದ ಮೂಲಕ ಗಮನ ಸೆಳೆದಿದ್ದ ರಘು ಶಾಸ್ತ್ರಿ ಇದೀಗ ನಟ ದರ್ಶನ್ ಅವರ ಸಂಬಂಧಿ ಮನೋಜ್ ಪಾದಾರ್ಪಣೆ ಚಿತ್ರವನ್ನು ನಿರ್ದೇಶಿಸುತ್ತಿದ್ದು ಚಿತ್ರಕ್ಕೆ ಟಕ್ಕರ್...

ರನ್ ಆ್ಯಂಟನಿ ಚಿತ್ರದ ಮೂಲಕ ಗಮನ ಸೆಳೆದಿದ್ದ ರಘು ಶಾಸ್ತ್ರಿ ಇದೀಗ ನಟ ದರ್ಶನ್ ಅವರ ಸಂಬಂಧಿ ಮನೋಜ್ ಪಾದಾರ್ಪಣೆ ಚಿತ್ರವನ್ನು ನಿರ್ದೇಶಿಸುತ್ತಿದ್ದು ಚಿತ್ರಕ್ಕೆ ಟಕ್ಕರ್ ಎಂಬ ಶೀರ್ಷಿಕೆ ಫೈನಲ್ ಆಗಿದೆ. 
ಟಕ್ಕರ್ ಚಿತ್ರದ ಫಸ್ಟ್ ಲುಕ್ ಅನ್ನು ನಿರ್ದೇಶಕ ರಘು ಶಾಸ್ತ್ರಿ ಬಿಡುಗಡೆ ಮಾಡಿದ್ದಾರೆ. ಮೊದಲಿನಿಂದಲೂ ಪಕ್ಕಾ ಕಮರ್ಷಿಯಲ್ ಚಿತ್ರವನ್ನು ನಿರ್ದೇಶನ ಮಾಡಬೇಕು ಎಂಬ ಆಲೋಚನೆ ಇತ್ತು. ಕಮರ್ಷಿಯಲ್ ಸಿನಿಮಾಗಳಲ್ಲಿ ಯಾವೆಲ್ಲ ಅಂಶಗಳು ಇರುತ್ತವೆಯೋ ಆ ಎಲ್ಲ ಅಂಶಗಳು ಈ ಚಿತ್ರದಲ್ಲಿರಲಿದೆ ಎಂದು ರಘು ಶಾಸ್ತ್ರಿ ಹೇಳಿದ್ದಾರೆ. 
ಇನ್ನು ಚಿತ್ರದ ಕಥೆ ಕುರಿತಂತೆ ಮಾತನಾಡಿರುವ ಅವರು ಮುಂದಿನ ಎರಡು ಮೂರು ವರ್ಷಗಳ ಬಳಿಕ ಭಾರತಕ್ಕೆ ಬರಬಹುದಾದ ಕ್ರೈಂವೊಂದರ ಅನಾವರಣ ಈ ಸಿನಿಮಾದಲ್ಲಿ ಆಗಲಿದೆ. ಅಂಥದ್ದೊಂದು ಕ್ರೈಂ ನಮ್ಮಲ್ಲಿಗೆ ಪ್ರವೇಶ ಪಡೆದರೆ ಏನೆಲ್ಲ ಸಮಸ್ಯೆಗಳು ಆಗಬಹುದು ಎಂದು ಈ ಸಿನಿಮಾದಲ್ಲಿ ಹೇಳಿದ್ದೇವೆ. 
ಹೀರೋ ಮತ್ತು ವಿಲನ್ ಮಧ್ಯೆಯೇ ಕಥೆ ಸಾಗುವುದರಿಂದ ಯಾರೂ ಯಾರಿಗೆ ಟಕ್ಕರ್ ನೀಡುತ್ತಾರೆ ಎಂಬ ಕುತೂಹಲ ಸಿನಿಮಾದಲ್ಲಿರಲಿದೆ ಎಂದು ರಘು ಶಾಸ್ತ್ರಿ ಹೇಳಿದ್ದಾರೆ. ಚಿತ್ರಕ್ಕೆ ಹುಲಿರಾಯ ಚಿತ್ರಕ್ಕೆ ಬಂಡವಾಳ ಹೂಡಿದ್ದ ನಾಗೇಶ್ ಕೊಗಿಲು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel