ಬೆಂಗಳೂರು: ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾ ಚಿತ್ರೀಕರಣ ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ, ನಿರ್ದೇಶಕ ಆರ್ ಚಂದ್ರು ಕುಂಗ್ ಫೂ ಫೈಟಿಂಗ್ ಸನ್ನಿವೇಶದೊಂದಿಗೆ ಶೂಟಿಂಗ್ ಪ್ರಾರಂಭಿಸಿದ್ದಾರೆ.
ಹೆಲಿಕಾಪ್ಟರ್ ಲ್ಯಾಂಡಿಂಗ್ ಸನ್ನಿವೇಶದ ಜೊತೆಗೆ ಮುಂಬಯಿಯಿಂದ 12 ಕುಂಗ್ ಫು ಪೈಟರ್ ಗಳು ಆಗಮಿಸುತ್ತಿದ್ದಾರೆ. ವಿನೋದ್ ಅವರಿಂದ ಇದೊಂದು ದೃಶ್ಯಕ್ಕೆ ಸಾಹಸ ಸಂಯೋಜನೆ ಮಾಡಲಾಗಿದೆ. ಬೆಂಗಳೂರಿನಿಂದ ಇಬ್ಬರು ಕಿಕ್ ಬಾಕ್ಸರ್ ಗಳು ಕೂಡ ಭಾಗವಹಿಸಲಿದ್ದಾರೆ ಎಂದು ಚಂದ್ರು ಹೇಳಿದ್ದಾರೆ,
ಮೊದಲ 10 ದಿನದ ಶೂಟಿಂಗ್ ಮುಗಿದ ಬಳಿಕ ಜೂನ್ 25 ರಿಂದ ರಚಿತಾ ರಾಮ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ, ಕಿರಣ್ ತೋಟಂಬೈಲೆ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.