ಭಾವನ 
ಸಿನಿಮಾ ಸುದ್ದಿ

ಇನ್‌ಸ್ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ನಟಿ ಭಾವನ ಡ್ರಗ್ ಡೀಲರ್!

ದಕ್ಷಿಣ ಭಾರತದ ನಟಿ ಭಾವನ ಅಭಿನಯದ ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ...

ದಕ್ಷಿಣ ಭಾರತದ ನಟಿ ಭಾವನ ಅಭಿನಯದ ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. 
ಈ ಬಗ್ಗೆ ಮಾತನಾಡಿರುವ ಭಾವನ ಅವರು, ನಿರ್ದೇಶಕ ಸೂರಿ ಅವರು ಅದ್ಭುತ ಚಿತ್ರವೊಂದನ್ನು ನೀಡಿದ್ದಾರೆ. ಅದರಲ್ಲಿ ನಾನು ಒಂದು ಪಾತ್ರ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ ಎಂದರು. 
ನಟ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ಭಾವನ ಅಭಿನಯಿಸುತ್ತಿದ್ದು ಮುಂದಿನ ವಾರದಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಚಿತ್ರದ ಕುರಿತು ಮಾಹಿತಿ ಬಿಟ್ಟುಕೊಡದ ಅವರು ಚಿತ್ರದಲ್ಲಿ ತಾವು ಡ್ರಗ್ ಡೀಲರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದಷ್ಟೇ ಹೇಳಿದರು. 
ನಾನು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಬೇಕು ಎಂದು ಎದುರು ನೋಡುತ್ತಿದ್ದೇನೆ. ಆದರೆ ಪುರುಷ ಪ್ರಾಬಲ್ಯದ ಉದ್ಯಮದಲ್ಲಿ ಅದು ಅಸಾಧ್ಯ. ಆದರೂ ಕೆಲವೊಮ್ಮೆ ಅಂತಹ ಪಾತ್ರಗಳು ಸಿಗುತ್ತದೆ ಎಂದರು. 
ಚಿತ್ರದಲ್ಲಿ ನಾನು ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ನನ್ನ ಮದುವೆಗೂ ಮುನ್ನ ಹಾಗೂ ಮದುವೆ ನಂತರವೂ ನಾನು ಯಾವುದೇ ಚಿತ್ರಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿರಲಿಲ್ಲ. ಕೆಲ ಉಡುಪುಗಳು ನನಗೆ ಒಗುತ್ತದೆ ಎಂದರೆ ಅಂತಹ ಉಡುಪುಗಳನ್ನು ನಾನು ಧರಿಸುತ್ತೇನೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT