ಸಾಂದರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಕ್ಯಾನೆ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಸೆಲ್ಫಿಗೆ ನಿರ್ಬಂಧ

ಕ್ಯಾನೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಸೆಲ್ಪಿಗೆ ಆಯೋಜಕರು ನಿರ್ಬಂಧ ವಿಧಿಸಲು ಚಿಂತನೆ ನಡೆಸಿದ್ದಾರೆ.

ಫ್ರಾನ್ಸ್ :  ಕ್ಯಾನೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೆಂಪು ಹಾಸಿನ ಮೇಲೆ ಸೆಲ್ಪಿಗೆ ಆಯೋಜಕರು ನಿರ್ಬಂಧ ವಿಧಿಸಲು ಚಿಂತನೆ ನಡೆಸಿದ್ದಾರೆ.

ಚಲನಚಿತ್ರೋತ್ಸದ ನಿರ್ದೇಶಕ ಥೈರಿ ಪ್ರೆಮ್ಯಾಕ್ಸ್ ಸಂದರ್ಶನವೊಂದರಲ್ಲಿಈ ವಿಷಯವನ್ನು ಹಂಚಿಕೊಂಡಿದ್ದಾರೆ. ಕೆಂಪು ಹಾಸಿನ ಮೇಲೆ ಸೆಲ್ಫಿ ತೆಗೆದುಕೊಳ್ಳುವುದು ಹಾಸ್ಯಾಸ್ಪದ ಎಂದಿದ್ದಾರೆ.

ಕೆಂಪು ಹಾಸಿನ ಮೇಲೆ ಸೆಲ್ಪಿ ನಿರಾಂತಕವಾಗಿ ಮುಂದುವರೆದಿದ್ದು, ಈ ಹೊಸ ಕ್ರಮವನ್ನು ಹೇಗೆ ಅನುಷ್ಠಾನಗೊಳಿಸುವುದು ಎಂಬ ಬಗ್ಗೆ ಚಿಂತನೆ ನಡೆಸಲಾಗಿದೆ. ನಾವು ಪೊಲೀಸರಲ್ಲ, ಆದರೆ ವೀಕ್ಷಕರಾಗಿ ಪರಿಸ್ಥಿತಿಯನ್ನು ಅವರಿಗೆ ಅರ್ಥಮಾಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

10 ವರ್ಷಗಳ ಹಿಂದೆ ಸೆಲ್ಫಿ ಅಸ್ವಿತ್ವದಲ್ಲಿ ಇರಲಿಲ್ಲ.   ವಿಶ್ವದಲ್ಲಿಯೇ ಅದಕ್ಕೆ ಪ್ರಾಮುಖ್ಯತೆನ್ನೂ  ನೀಡುತ್ತಿರಲಿಲ್ಲ. ಆದರೆ, ಇತ್ತೀಚಿಗೆ ಅದರ ಹುಚ್ಚು ಹೆಚ್ಚಾಗಿರುವುದು ಅಸಹ್ಯ ಮೂಡಿಸಿದೆ.  ನಾವು ಕ್ಯಾನೆಗೆ  ಹೋಗೋದು ಚಿತ್ರ ವೀಕ್ಷಣೆಗಾಗಿ,  ಸೆಲ್ಪಿ ತೆಗೆಯುವುದಕ್ಕೆ ಅಲ್ಲ ಎನ್ನುತ್ತಾರೆ ಪ್ರೆಮ್ಯಾಕ್ಸ್.

ಸೆಲ್ಪಿ ತೆಗೆದುಕೊಳ್ಳುವುದರಿಂದ ಅಸಹ್ಯವಾಗಿ ಕಾಣುತ್ತದೆ. ಚಲನಚಿತ್ರೋತ್ಸವದ ಪ್ರತಿಷ್ಠಿತೆ ಕಾಪಾಡುವುದು ತಮ್ಮ ಕರ್ತವ್ಯವಾಗಿದೆ. ಹಾಗಾಗೀ ಅದರ ಕಡಿವಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು  ಪ್ರೆಮಾಕ್ಸ್  ಹೇಳಿದ್ದಾರೆ.

 ಈ ಬಾರಿ ಕ್ಯಾನೆಗೆ ಆಯ್ಕೆ ಆಗುವ ಚಲನಚಿತ್ರಗಳನ್ನು  ಫ್ರೆಂಚ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಹೊಸ ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT