ರೇಸಿಂಗ್ ಚಿತ್ರ 
ಸಿನಿಮಾ ಸುದ್ದಿ

ಯೋಗರಾಜ್ ಭಟ್ ಅವರ 'ಪಂಚತಂತ್ರ' ಚಿತ್ರದ ರೇಸಿಂಗ್ ಟ್ರಕ್ ಗೆ ವಿಹಾನ್ ಗೌಡ ಸಜ್ಜು !

ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದಲ್ಲಿ ವಿಹಾನ್ ಗೌಡ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ರೇಸಿಂಗ್ ಟ್ರಕ್ ಈ ಚಿತ್ರದ ಪ್ರಮುಖ ಅಂಶವಾಗಿದ್ದು, ಅದಕ್ಕಾಗಿ ವಿಹಾನ್ ಗೌಡ ಸಜ್ಜುಗೊಳ್ಳುತ್ತಿದ್ದಾರೆ.

ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದಲ್ಲಿ ವಿಹಾನ್ ಗೌಡ  ನಾಯಕ ನಟರಾಗಿ   ಅಭಿನಯಿಸುತ್ತಿದ್ದಾರೆ. ರೇಸಿಂಗ್ ಟ್ರಕ್ ಈ  ಚಿತ್ರದ ಪ್ರಮುಖ ಅಂಶವಾಗಿದ್ದು, ಅದಕ್ಕಾಗಿ ವಿಹಾನ್ ಗೌಡ ಸಜ್ಜುಗೊಳ್ಳುತ್ತಿದ್ದಾರೆ.

ಪ್ರಸ್ತುತ ರಾಮಘರ ಅಥವಾ ಪಾಂಡವಪುರದಲ್ಲಿ ಚಿತ್ರ ತಂಡವಿದ್ದು, ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ನಾಳೆ ನಡೆಯಲಿದೆ. ಇಲ್ಲಿ ಕೆಲ ಸನ್ನಿವೇಶಗಳನ್ನು ಚಿತ್ರೀಕರಣಗೊಳಿಸಲಿದ್ದು, 18 ದಿನದೊಳಗೆ ಅಂದರೆ ಜೂನ್ 1 ರೊಳಗೆ ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಚಿತ್ರದ ಸದಸ್ಯರೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಭಾರತದ ಪ್ರಸಿದ್ಧ ಸಾಹಸ ನಿರ್ದೇಶನಕಾರ ಜಾಲಿ ಬಾಸ್ಟಿನ್ ಈ ಚಿತ್ರಕ್ಕೆ ಸಾಹಸ ನಿರ್ದೇಶನವಿದ್ದು,   ರೇಸಿಂಗ್ ಟ್ರಕ್ ನಲ್ಲಿ ಪರಿಣತಿ ಹೊಂದಿದ್ದಾರೆ. ರೇಸರ್ ಮೊನಿಸ್ ಕೂಡಾ ಈ ಸಂಬಂಧಿತ ಚಿತ್ರೀಕರಣದಲ್ಲಿ  ಮಾರ್ಗದರ್ಶನ, ಸಲಹೆ ನೀಡಲಿದ್ದಾರೆ.  ಚಿತ್ರೀಕರಣದಲ್ಲಿ ಅವರ ಕೂಡಾ ಭಾಗಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

 ಪಂಚತಂತ್ರದ ಎರಡು ಗೀತೆಗಳನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ವಿಹಾನ್ ಗೌಡ ಅವರೊಂದಿಗೆ ಸೋನಾಲ್ ಮಾಂಟೆರಿಯೊ ಮತ್ತ ಅಕ್ಷರ ಗೌಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.



ಯುವ ಮತ್ತು ಹಳೆಯ ಪೀಳಿಗೆಯ ನಡುವಿನ ಸಂಘರ್ಘವನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ. ರಂಗಾಯಣ ರಘು ಹಾಗೂ ಸಿಮ್ರಾನ್ ಕೂಡಾ  ಈ  ಚಿತ್ರದಲ್ಲಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು,  ಸುಜ್ಞಾನ್  ಕ್ಯಾಮರಾ ಕೆಲಸ ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಗ್ರರ ವಿರುದ್ಧ 'ಪ್ರಹಾರ್' ನಿರ್ಣಾಯಕ: ಕೇಂದ್ರದಿಂದ ದೇಶದ ಮೊದಲ ಭಯೋತ್ಪಾದನಾ ವಿರೋಧಿ ನೀತಿ ಬಿಡುಗಡೆ!

ರನ್ ರೇಟ್ ಹೆಚ್ಚಿಸಿಕೊಳ್ಳಲು ಜಿಂಬಾಬ್ವೆ ವಿರುದ್ಧ ದಾಖಲೆಯ 254 ರನ್ ಸಿಡಿಸಿದ ವೆಸ್ಟ್ ಇಂಡೀಸ್, ಭಾರತಕ್ಕೆ ಕಂಟಕ!

T20 World Cup 2026: ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಗೆ 107 ರನ್ ಗಳ ಭರ್ಜರಿ ಜಯ

ವಿಬಿ ಜಿ ರಾಮ್ ಜಿಯಿಂದ 16.12 ಕೋಟಿ ಜನ ನಿರುದ್ಯೋಗಿಗಳು; ಮನರೇಗಾ ಮರುಜಾರಿಗೊಳಿಸುವವರೆಗೆ ಹೋರಾಟ

IDFC First Bank ವಂಚನೆ ಪ್ರಕರಣ: ತನಿಖೆಗೆ ಆದೇಶಿಸಿದ ಹರಿಯಾಣ CM ಸೈನಿ

SCROLL FOR NEXT