ಸಿನಿಮಾ ಸುದ್ದಿ

ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಸಾಂಗ್ ನ ಹೊಸ ಟೀಸರ್ ವೈರಲ್

Raghavendra Adiga
ತಿರುವನಂತಪುರ(ಕೇರಳ): ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಒರು ಅಡರ್ ಲವ್ ಚಿತ್ರದ ಹಾಡಿನ ಟೀಸರ್ ಮೂಲಕ ಮತ್ತೆ ಎಲ್ಲೆಡೆ ವೈರಲ್ ಆಗಿದ್ದಾರೆ.
ಒರು ಅಡರ್ ಲವ್ ಚಿತ್ರದ `ಮೂನ್ನಲೇ ಪೊನ್ನಲೇ’ ಹಾಡಿನ ಟೀಸರ್ ಇದೀಗ ಬಿಡುಗಡೆಗೊಂಡಿದ್ದು ಎಲ್ಲೆಡೆ ವೈರಲ್ ಆಗಿದೆ. ಹೈಸ್ಕೂಲ್ ಹುಡುಗರ ಪ್ರೇಮವನ್ನು ಬಿಂಬಿಸುವ ಈ ಹಾಡಿನ ದೃಶ್ಯಗಳು ನೋಡುಗರಲ್ಲಿ ತಮ್ಮ ಜೀವನದಲ್ಲಿ ನಡೆದ ಹಳೆ ನೆನಪುಗಳನ್ನು ಕೆರಳಿಸುತ್ತಿದೆ.
ಟೀಸರ್ ನಲ್ಲಿ ನಟಿ ಪ್ರಿಯಾ ಜತೆಗೆ ನಟ ರೋಷನ್ ಸಹ ಮತ್ತೆ ಮೋಡಿ ಮಾಡಿದ್ದಾರೆ.ಟೀಸರ್ ವೀಡಿಯೋವನ್ನು ಇದುವರೆಗೆ 8 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಚಿತ್ರದ ಹಾಡಿನ ಒಂದು ಪಾರ್ಟ್ ನ್ನು ಈ ಹಿಂದೆ ಚಿತ್ರತಂಡ ಬಿಡುಗಡೆಗೊಳಿಸಿದ್ದು ಅದರಲ್ಲಿ ನಟಿ ಪ್ರಿಯಾ ತಾವು ಕಣ್ ಸನ್ನೆ ಮಾಡುವ ದೃಶ್ಯಗಳು ಇದ್ದವು. ಇದು ಮಲಯಾಳಂ ಮಾತ್ರವಲ್ಲದೆ ಭಾರತದ ಬಹುತೇಕ ಕಡೆ ನಟಿಗೆ ಜನಪ್ರಿಯತೆ ತಂದು ಕೊಟ್ಟಿತ್ತು. ಬಾಲಿವುಡ್, ಟಾಲಿವುಡ್ ಚಿತ್ರರಂಗದ ಘಟಾನುಘಟಿಗಳು ಪ್ರಿಯಾ ವಾರಿಯರ್ ಗೆ ಶುಭ ಹಾರೈಸಿದ್ದರು.
ಹಾಡಿನ ಜನಪ್ರಿಯತೆ ಕಾರಣ ಅನೇಕ ಜಾಹೀರಾತು ಮತ್ತು ಚಿತ್ರ ನಿರ್ಮಾಪಕರಿಂದ ಪ್ರಿಯಾ ಅವರಿಗೆ ಆಫರ್ ಗಳು ಬಂದಿದ್ದವು ಆದರೆ ಒರು ಅಡರ್ ಲವ್  ಚಿತ್ರದ ಕೆಲಸ ಮುಗಿಯುವವರೆಗೆ ತಾನು ಯಾವ ಹೊಸ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ಅವರುಯ್ ಸ್ಪಷ್ಟಪಡಿಸಿದ್ದರು.
SCROLL FOR NEXT