ಅಮರ್, ಅಭಿಷೇಕ್, ತಾನ್ಯಾ ಹೋಪೆ 
ಸಿನಿಮಾ ಸುದ್ದಿ

'ಅಮರ್'ಗಾಗಿ ಸ್ವಿಡ್ಜರ್ ಲ್ಯಾಂಡಿನ ಮೈಕೊರೆವ ಚಳಿಯಲ್ಲಿ ತಾನ್ಯಾ, ಅಭಿಷೇಕ್ ಚಿತ್ರೀಕರಣ!

ಸ್ವಿಡ್ಜರ್ ಲ್ಯಾಂಡಿನಲ್ಲಿ "ಅಮರ್" ಚಿತ್ರತಂಡ ತಮ್ಮ ಚಿತ್ರದ ದ್ವಿತೀಯಾರ್ಧದ ಶೂಟಿಂಗ್ ನಲ್ಲಿ ತೊಡಗಿದೆ. ಅಲ್ಲಿ ಚಿತ್ರತಂಡಕ್ಕೆ ಅತ್ಯಂತ ಚಳಿಯಿಂದ ಕೂಡಿದ ಶೀತಲ ವಾತಾವರಣದ ಅನುಭವವಾಗಿದೆಯಂತೆ.

ಬೆಂಗಳೂರು: ಸ್ವಿಡ್ಜರ್ ಲ್ಯಾಂಡಿನಲ್ಲಿ "ಅಮರ್" ಚಿತ್ರತಂಡ ತಮ್ಮ ಚಿತ್ರದ ದ್ವಿತೀಯಾರ್ಧದ ಶೂಟಿಂಗ್ ನಲ್ಲಿ ತೊಡಗಿದೆ. ಅಲ್ಲಿ ಚಿತ್ರತಂಡಕ್ಕೆ ಅತ್ಯಂತ ಚಳಿಯಿಂದ ಕೂಡಿದ ಶೀತಲ ವಾತಾವರಣದ ಅನುಭವವಾಗಿದೆಯಂತೆ.
ಚಿತ್ರದ ಪ್ರಮುಖ ನಟರಾದ ಅಭಿಷೇಕ್ ಹಾಗೂ ತಾನ್ಯಾ ಹೋಪೆ ಅಲ್ಲಿನ ಐದು ಡಿಗ್ರಿ ತಾಪಮಾನವಿರುವ ಶೀತಲ ವಾತಾವರಣದಲ್ಲೇ ಹಾಡು ಹಾಗೂ ಕೆಲ ದೃಶ್ಯಗಳ ಚಿತ್ರೀಕರಣ ನಡೆಸಿದ್ದಾರೆ.
"ತಾನ್ಯಾ ಅವರಿಗೆ ಅವರು ಧರಿಸಿದ ಉಡುಪಿನ ಕಾರಣ ಇಂತಹಾ ವಾತಾವರಣದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸುವುದು ಅತ್ಯಂತ ಕಠಿಣವಾಗಿತ್ತು.ಅವರು ಶೀತಲ ವಾತಾವರಣದಿಂದ ಉಸಿರಾಡುವುದಕ್ಕೆ ಸಹ ಕಷ್ಟಪಟ್ಟರು" ಚಿತ್ರತಂಡ ಅತ್ಯಂತ ವಿಷಮ ಪರಿಸ್ಥಿತಿ ಅನುಭವಿಸಿದ್ದಾಗಿ ತಂಡದ ಓರ್ವ ಸದಸ್ಯ ಹೇಳಿದ್ದಾರೆ.
ದೇವರಾಜ್, ಚಿಕ್ಕಣ್ಣ, ಸಾಧು ಕೋಕಿಲಾ ಸೇರಿದಂತೆ ಬಹುದೊಡ್ಡ ತಾರಾಬಳಗವಿರುವ ನಾಗಶೇಖರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಆಲ್ಫ್ ಪರ್ವತ ಶ್ರೇಣಿಗಳಲ್ಲಿ ನವೆಂಬರ್ 18ರವರೆಗೆ ನಡೆಯಲಿದೆ. ಇದಾದ ಬಳಿಕ ಬೆಂಗಳೂರಿಗೆ ಹಿಂತಿರುಗಲಿರುವ ಚಿತ್ರತಂಡ ಡಿಸೆಂಬರ್ 15ಕ್ಕೆ ಚಿತ್ರೀಕರಣ ಪೂರ್ಣಗೊಳಿಸುವ ಯೋಜನೆ ಹಾಕಿಕೊಂಡಿದೆ.
ಸತ್ಯ ಹೆಗಡೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.ಸುಧಾರಾಣಿ, ನಿರೂಪ್ ಭಂಡಾರಿ, ರಚಿತಾ ರಾಮ್ ಸಹ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ