ಶ್ರೀಲಂಕಾದಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿ ವಾಪಸ್ಸಾದ ಗೋಲ್ಡನ್ ಸ್ಟಾರ್ ಗಣೇಶ್ 
ಸಿನಿಮಾ ಸುದ್ದಿ

ಶ್ರೀಲಂಕಾದಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿ ವಾಪಸ್ಸಾದ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಹಾರರ್-ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿದ್ದು, ಗಿಮಿಕ್ ಚಿತ್ರದ ಚಿತ್ರೀಕರಣವನ್ನು ಶ್ರೀಲಂಕಾದಲ್ಲಿ ಮಾಡಲಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಹಾರರ್-ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿದ್ದು, ಗಿಮಿಕ್ ಚಿತ್ರದ ಚಿತ್ರೀಕರಣವನ್ನು ಶ್ರೀಲಂಕಾದಲ್ಲಿ ಮಾಡಲಾಗಿದೆ. 
15 ದಿನಗಳ ಕಾಲ ಚಿತ್ರತಂಡ ಶ್ರೀಲಂಕಾದಲ್ಲಿ ಚಿತ್ರೀಕರಣ ನಡೆಸಿದ್ದು, ನಾಗಣ್ಣ ನಿರ್ದೇಶನದ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತ ತಲುಪಿದೆ. ಹಾರರ್ ಚಿತ್ರದ ಥೀಮ್  ಆಗಿರುವುದರಿಂದ ರಾತ್ರಿ ವೇಳೆ ಒಂದೇ ಬಾರಿಗೆ ಚಿತ್ರೀಕರಣ ನಡೆಸುವುದು ಹೊಸ ಅನುಭವವಾಗಿತ್ತು. ಸಂಜೆ 6 ರಿಂದ ಶೂಟಿಂಗ್ ಪ್ರಾರಂಭಿಸಿದರೆ ಮುಂದಿನ ದಿನ ಬೆಳಿಗ್ಗೆ 5 ಗಂಟೆಗೆ ಮುಕ್ತಾಯಗೊಳ್ಳುತ್ತಿತ್ತು ಎಂದು ಗಣೇಶ್ ಹೇಳಿದ್ದಾರೆ. 
ಹಾರರ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತಾದ್ದರಿಂದ,  ಸುಂದರ್ ರಾಜ್, ಶೋಭ್ ರಾಜ್, ಗುರುದತ್, ರವಿಶಂಕರ್ ಗೌಡ ಅವರೆಲ್ಲರೂಂದಿಗೆ ಅದ್ಭುತ ಕ್ಷಣಗಳನ್ನು ಕಳೆದಿದ್ದೆ.  ರಾತ್ರಿ ವೇಳೆ ದೆವ್ವಗಳ ಕುರಿತ ಮಾತುಕತೆಯೂ ನಡೆಯುತ್ತಿತ್ತು ಎಂದು ಗಣೇಶ್ ಹೇಳಿದ್ದಾರೆ. 
ಗಣೇಶ್ ನಿರ್ವಹಿಸುತ್ತಿರುವ ಪಾತ್ರದ ಚಿತ್ರೀಕರಣ 10-15 ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಇನ್ನು ಈ ನಡುವೆಯೇ ಗಣೇಶ್ ಅವರ ಆರೆಂಜ್ ಚಿತ್ರವೂ ಬಿಡುಗಡೆಗೆ ಸಜ್ಜುಗೊಂಡಿದ್ದು ಅ.25 ರಿಂದ ಗಣೇಶ್ ಆರೆಂಜ್ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.  ಈ ಬಳಿಕ ಡಿಸೆಂಬರ್ ನಲ್ಲಿ ಗಣೇಶ್ ನಟನೆಯ ಗೀತಾ ಸಿನಿಮಾದ ಚಿತ್ರೀಕರಣವೂ ಪ್ರಾರಂಭವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

ಸಾರಿಗೆ ಸಚಿವ byrati suresh ದಿಢೀರ್ ಸಿಟಿ ರೌಂಡ್ಸ್, ರಾತ್ರೋರಾತ್ರಿ BMTC ಚಾಲಕ, ನಿರ್ವಾಹಕರಿಗೆ ಅಮಾನತು ಶಾಕ್, Video

'ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಿ, ಅದರ ಬೆಲೆ ತೆರಬೇಕಾಗುತ್ತದೆ': Hormuz ಬಂದ್ ಮಾಡಿದ ಇರಾನ್, ಅಮೆರಿಕ ಮತ್ತೊಂದು ವೈಮಾನಿಕ ದಾಳಿ

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!