ಸಿನಿಮಾ ಸುದ್ದಿ

ಆ್ಯಂಬುಲೆನ್ಸ್ ನಲ್ಲಿ ತೆರಳಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ವೀಕ್ಷಿಸಿದ 'ರೆಬೆಲ್ ಸ್ಟಾರ್'!

Shilpa D
ಬೆಂಗಳೂರು: ಹದಗೆಟ್ಟ ಆರೋಗ್ಯ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಯಾವತ್ತೂ ಸಿನಿಮಾ ಮೇಲಿನ ಪ್ರೀತಿ ಕಡಿಮೆಯಾಗುವಂತೆ ಮಾಡಿಲ್ಲ,  
ಅನಾರೋಗ್ಯ ಕಾರಣ ಅಂಬರೀಷ್ ಆಸ್ಪತ್ರೆಗೆ ದಾಖಲಾಗಿದ್ದರು, ಅವರು ನಟಿಸಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾಗೆ ಸೆನಿಮಾಗೆ ಯು ಪ್ರಮಾಣ ಪತ್ರ ಸಿಕ್ಕಿದೆ ಎಂದು ತಿಳಿದ ಮೇಲೆ ಸಿನಿಮಾ ವೀಕ್ಷಿಸಲಸು ಬಯಸಿದ್ದಾರೆ, ನಂತರ ಆಸ್ಪತ್ಪೆಯಿಂದ ಆ್ಯಂಬುಲೆನ್ಸ್ ನಲ್ಲಿ ತೆರಳಿ ಸಿನಿಮಾ ನೋಡಿದ್ದಾರೆ ಎಂದು ಪ್ರೊಡಕ್ಷನ್ ತಂಡದ  ಸದಸ್ಯರೊಬ್ಬರು ಹೇಳಿದ್ದಾರೆ.
ಭಾನುವಾರ ಸಿನಮಾದ ಆಡಿಯೋ ರಿಲೀಸ್ ಆಗಬೇಕಿತ್ತು, ಆದರೆ ಅಂಬರೀಶ್ ಅನಾರೋಗ್ಯ ಕಾರಣ ಮುಂದೂಡಲಾಗಿದೆ. ಗುರುದತ್ತ ಗಾಣಿಗ ನಿರ್ದೇಶನದ ಈ ಚಿತ್ರದಲ್ಲಿ ಅಂಬರೀಷ್, ಸುಹಾಸಿನಿ, ಸುದೀಪ್ ಮತ್ತು ಶೃತಿಹರಿಹರನ್ ನಟಿಸಿದ್ದಾರೆ.
SCROLL FOR NEXT