ಕಥಾ ಸಂಗಮ ಶೂಟಿಂಗ್ 
ಸಿನಿಮಾ ಸುದ್ದಿ

ಕಥಾ ಸಂಗಮ ಅಂತಿಮ ಹಂತದ ಶೂಟಿಂಗ್ ಪೂರ್ಣ!

ಏಳು ವಿವಿಧ ಸಣ್ಣ ಕಥೆಗಳ ಸಂಕಲನವಾಗಿರುವ ಕಥಾ ಸಂಗಮ ಸಿನಿಮಾ ಶೂಟಿಂಗ್ ಅಂತಿಮ ಹಂತ ತಲುಪಿದೆ. ಎಚ್.ಕೆ ಪ್ರಕಾಶ್ ನಿರ್ಮಿಸುತ್ತಿದ್ದು, ರಿಷಬ್ ಶೆಟ್ಟಿ ..

ಬೆಂಗಳೂರು: ಏಳು ವಿವಿಧ ಸಣ್ಣ ಕಥೆಗಳ ಸಂಕಲನವಾಗಿರುವ ಕಥಾ ಸಂಗಮ ಸಿನಿಮಾ ಶೂಟಿಂಗ್ ಅಂತಿಮ ಹಂತ ತಲುಪಿದೆ. ಎಚ್.ಕೆ ಪ್ರಕಾಶ್  ನಿರ್ಮಿಸುತ್ತಿದ್ದು, ರಿಷಬ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಕಿರಣ್ ರಾಜ್, ಚಂದ್ರಜಿತ್ ಬೆಳ್ಳಿಯಪ್ಪ, ಸೇರಿದಂತೆ ಯುವ ನಿರ್ದೇಶಕರುಗಳು ಒಗ್ಗೂಡಿದ್ದಾರೆ.
ಸಿನಿಮಾದಲ್ಲಿ ಹರಿಪ್ರಿಯ, ಕಿಶೋರ್ ಮತ್ತು ಯಜ್ಞಾ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ, ಲಚ್ಚವ್ವ ಎಂಬ ಟೈಟಲ್ ನ ಕಥೆಯನ್ನು ನವ ನಿರ್ದೇಶಕ  ಜೈಶಂಕರ್ ನಿರ್ದೇಶಿಸಿದ್ದಾರೆ, ನಟನೆಯ ಯಾವು ಅನುಭವವಿಲ್ಲದವರೂ ಸಿನಿಮಾದಲ್ಲಿ ನಟಿಸಿದ್ದಾರೆ, ಇದು ಸಿನಿಮಾದ 20 ನಿಮಿಷದ ಹೈಲೈಟ್ ಆಗಿದೆ,.
ತಿಥಿ ಸಿನಿಮಾದಂತೆ ಇದರಲ್ಲಿ ಕಲಾವಿದರಲ್ಲದವರನ್ನು ಆಯ್ಕೆ ಮಾಡಿ ಸಿನಿಮಾದಲ್ಲಿ ಅಭಿನಯ ಮಾಡಿಸಲಾಗಿದೆ ಎಂದು ಜೈ ಶಂಕರ್ ಹೇಳಿದ್ದಾರೆ,  ನಾವು ಸರಿಯಾದ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ, ಆಡಿಷನ್ ನಂತರ ನಾವು ನಿರ್ಮಾಣ ಹಂತದ ನಿವೇಶನಕ್ಕೆತೆರಳಿದೆವು,  ಅದರಲ್ಲಿ ಪಾರವ್ವ ನನಗೆ ಕಂಡು ಬಂದರು,  ಹುಬ್ಬಳ್ಳಿ ಮೂಲದ ಆಕೆ 40 ವರ್ಷದ ತಾಯಿಪಾತ್ರ ಮಾಡಿದ್ದಾಳೆ, ಗುಲ್ಬರ್ಗಾ ಮೂಲದ ರಾಘವೇಂದ್ರ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಆತ ಬೀರ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ,.
ಈ ಎಪಿಸೋಡ್ ನಂತರ ಕಥಾ ಸಂಗಮದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾತ್ರ ಬಾಕಿ ಉಳಿದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ