ಸಿನಿಮಾ ಸುದ್ದಿ

ಶಿವರಾಜ್ ಕೆಆರ್ ಪೇಟೆ ಅಭಿನಯದ 'ನಾನು ಮತ್ತು ಗುಂಡ' ಚಿತ್ರದ ಟೀಸರ್ ಇಂದು ಬಿಡುಗಡೆ!

Vishwanath S
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ವಿಜೇತ ಶಿವರಾಜ್ ಕೆಆರ್ ಪೇಟೆ ಅಭಿನಯದ ನಾನು ಮತ್ತು ಗುಂಡ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಲಿದೆ.
ಶ್ರೀನಿವಾಸ್ ತಿಮ್ಮಯ್ಯ ಪಾದಾರ್ಪಣೆ ಚಿತ್ರದಲ್ಲಿ ಶಿವರಾಜ್ ಅಭಿನಯಿಸಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ಮುಕ್ತಾಯಗೊಂಡಿದ್ದು ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಚಿತ್ರದಲ್ಲಿ ಮೂರು ಲ್ಯಾಬ್ರಡೋರ್ ನಾಯಿಗಳನ್ನು ಬಳಸಲಾಗಿದೆ. ಚಿತ್ರ ಭಾವನಾತ್ಮಕವಾಗಿ ಮೂಡಿ ಬಂದಿದೆ.  
ಚಿತ್ರವನ್ನು ರಘು ಹಾಸನ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಂಯುಕ್ತ ಹೊರನಾಡ್ ನಾಯಕಿಯಾಗಿ ಅಭಿನಯಿಸಿದ್ದು ಕೃತಿಕಾ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. 
SCROLL FOR NEXT