ಭರತ್ ಗೌಡ 
ಸಿನಿಮಾ ಸುದ್ದಿ

ಪನ್ನಾಗ ಸೋಮಶೇಖರ್ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಭರತ್ ಗೌಡ, ಶ್ರುತಿ ಪ್ರಕಾಶ್ ಜೋಡಿ

ಕಿರು ಚಿತ್ರ ನಿರ್ದೇಶಕ, ಸಂಭಾಷಣೆಕಾರ ಪನ್ನಾಗ ಸೋಮಶೇಖರ್ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಕಡಲ ತೀರದ ಭಾರ್ಗವ ಚಿತ್ರಕ್ಕೆ ನಿನ್ನೆ ಮುಹೂರ್ತ ನೆರವೇರಿದ್ದು, ಮುಂದಿನ 10 ದಿನಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.

ಕಿರು ಚಿತ್ರ ನಿರ್ದೇಶಕ, ಸಂಭಾಷಣೆಕಾರ ಪನ್ನಾಗ ಸೋಮಶೇಖರ್  ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಕಡಲ ತೀರದ ಭಾರ್ಗವ ಚಿತ್ರಕ್ಕೆ ನಿನ್ನೆ ಮುಹೂರ್ತ ನೆರವೇರಿದ್ದು ಮುಂದಿನ 10 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಯಲಿದೆ.

ಭರತ್ ಗೌಡ ನಾಯಕನಾಗಿ ಶ್ರುತಿ ಪ್ರಕಾಶ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರ ಪ್ರೀತಿ ಹಾಗೂ ಸ್ನೇಹದ ಮತ್ತಿತರ ಅಂಶಗಳ ಕಥಾ ಹಂದರವನ್ನು ಒಳಗೊಂಡಿದ್ದು,  ವರುಣ್ ರಾಜ್,  ಕೆಪಿ ಶ್ರೀಧರ್ ಮತ್ತಿತರರು ನಟಿಸುತ್ತಿದ್ದಾರೆ.

ಚಿತ್ರ ತಂಡ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಬಿಗ್ ಬಾಗ್ ಖ್ಯಾತಿಯ ಶ್ರುತಿ ಪ್ರಕಾಶ್ , ರಂಗಮಂದಿರ, ಪಿಡಾ, ಗೂಳಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನಿಲ್ ಸಿಜಿ  ಸಂಗೀತ ಸಂಯೋಜಿಸಿದ್ದು, ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!