ಕಲಾಕೃತಿಯೊಂದಿಗೆ ಯಶ್ ದಂಪತಿ 
ಸಿನಿಮಾ ಸುದ್ದಿ

'ಆಯಿರಾಳ ಪುಟ್ಟ ಕಾಲು, ಕೈಗಳ ಸುಂದರ ಕಲಾಕೃತಿಗೆ ಯಶ್ ದಂಪತಿ ಪಿಧಾ! ನೆಟ್ಟಿಗರು ಗರಂ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಂತೆ ಈ ದಂಪತಿಗೆ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ರಾಧಿಕಾ ಪಂಡಿತ್  ಮೇಕಪ್ ಮ್ಯಾನ್  ಪ್ರಶಾಂತ್ , ಆಯಿರಾಳ ಪುಟ್ಟ ಕಾಲು ಮತ್ತು ಕೈಗಳ ಸುಂದರ ಕಲಾಕೃತಿಗಳನ್ನು ಈ ಸ್ಟಾರ್ ದಂಪತಿಗೆ ನೀಡಿದ್ದಾರೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಂತೆ ಈ ದಂಪತಿಗೆ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ರಾಧಿಕಾ ಪಂಡಿತ್  ಮೇಕಪ್ ಮ್ಯಾನ್  ಪ್ರಶಾಂತ್ , ಆಯಿರಾಳ ಪುಟ್ಟ ಕಾಲು ಮತ್ತು ಕೈಗಳ ಸುಂದರ ಕಲಾಕೃತಿಗಳನ್ನು ಈ ಸ್ಟಾರ್ ದಂಪತಿಗೆ ನೀಡಿದ್ದಾರೆ.

ಪುಟ್ಟ ಕಾಲು ಮತ್ತು ಕೈಗಳ ಕಲಾಕೃತಿಗಳಿಗೆ ಸುಂದರವಾದ ಫ್ರೇಮ್ ಹಾಕಿಸಿದ್ದಾರೆ. ಈ ಕಲಾಕೃತಿ ಮೇಲೆ ಆಯಿರಾ ಜನ್ಮ ದಿನಾಂಕವನ್ನು ಬರೆದು ಗಿಫ್ಟ್ ನೀಡಿದ್ದಾರೆ.


ಇದನ್ನು ನೋಡಿದ ಯಶ್ ದಂಪತಿ ಫುಲ್ ಖುಷಿ ಆಗಿದ್ದಾರೆ. ಇಂತಹ ಅದ್ಬುತವಾದ ಗಿಫ್ಟ್  ಮಗಳಿಗೆ ಸಿಕ್ಕಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಗಿಫ್ಟ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಯಶ್ ಹಾಗೂ ರಾಧಿಕಾ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಇಂತಹ ಸುಂದರವಾದ ಗಿಫ್ಟ್ ನೀಡಿರುವ ಮೇಕಪ್ ಮ್ಯಾನ್ ಪ್ರಶಾಂತ್ ಗೆ ಯಶ್ ದಂಪತಿ ಧನ್ಯವಾದ ತಿಳಿಸಿದ್ದಾರೆ.. ಇನ್ನೂ ಈ ವಿಡಿಯೋ ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿಯೇ ಇದ್ದು, ಯಶ್ ಮತ್ತು ರಾಧಿಕಾ ಎಲ್ಲಿಯೂ ಕನ್ನಡ ಪದವನ್ನು ಬಳಸಿಲ್ಲ. ಇದಕ್ಕೆ ನೆಟ್ಟಿಗರು ಗರಂ ಆಗಿದ್ದು, ಕನ್ನಡದಲ್ಲಿ ಹೇಳಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!