ಸಿನಿಮಾ ಸುದ್ದಿ

ಕೆಜಿಎಫ್ ಗರುಡ ಕುಟುಂಬಕ್ಕೆ ಆಗಮಿಸಿದ ಪುಟಾಣಿ ರಾಜಕುಮಾರಿ!

Raghavendra Adiga

ಬೆಂಗಳೂರು: ಕೆಜಿಎಫ್ ಚಾಪ್ಟರ್ 1ರ ಮುಖ್ಯ ವಿಲನ್ ಪಾತ್ರಧಾರಿ ರಾಮಚಂದ್ರ ರಾಜು ಅಲಿಯಾಸ್ ಗರುಡ ಹೆಣ್ಣುಮಗುವಿನ ತಂದೆಯಾಗಿದ್ದಾರೆ.

ಕಳೆದ ನವೆಂಬರ್ 21ರಂದು ಗರುಡ ಅವರ ಪತ್ನಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಗರುಡ ಈ ಸಂಬಂಧ ಡಿಸೆಂಬರ್ 1ರಂದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.

"ನಿನ್ನೊಂದಿಗೆ ನಮ್ಮ ಕುಟುಂಬವೀಗ ಪರಿಪೂರ್ಣವಾಗಿದೆ. ನವೆಂಬರ್ 21ರಂದು ನಾವು ಮುದ್ದಾದ ಹೆಣ್ಣುಮಗುವನ್ನು ಬರಮಾಡಿಕೊಂಡಿದ್ದೇವೆ" ಗರುಡ ಸಾಮಾಜಿಕ ತಾಣ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಈ ಸಾಲುಗಳೊಡನೆ ಗರ್ಭಿಣಿ ಪತ್ನಿ ಹಾಗೂ ಓರ್ವ ಪುತ್ರನ ಜತೆಗಿರುವ ತಮ್ಮ ಚಿತ್ರವೊಂದನ್ನು ಸಹ ಅವರು ಹಂಚಿಕೊಂಡಿದ್ದಾರೆ.

SCROLL FOR NEXT