ಪ್ರೇಮಿಗಳ ದಿನದಂದೇ ಕೂಡಿಬಂತು ಕಂಕಣ:, ಸಂಬಂಧಿ ಜತೆ ಹಸೆಮಣೆ ಏರಿದ 'ಅಗ್ನಿಸಾಕ್ಷಿ' ಸಿದ್ದಾರ್ಥ 
ಸಿನಿಮಾ ಸುದ್ದಿ

ಕೂಡಿಬಂದ ಕಂಕಣ:, ಪ್ರೇಮಿಗಳ ದಿನದಂದೇ ಸಂಬಂಧಿ ಜತೆ ಹಸೆಮಣೆ ಏರಿದ 'ಅಗ್ನಿಸಾಕ್ಷಿ' ಸಿದ್ದಾರ್ಥ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ದ ಧಾರಾವಾಹಿ "ಅಗ್ನಿಸಾಕ್ಷಿ" ಯ ಸಿದ್ದಾರ್ಥ್ ಪಾತ್ರಧಾರಿ ವಿಜಯ್ ಸೂರ್ಯಗೆ ಕಂಕಣ ಬಲ ಕೂಡಿ ಬಂದಿದೆ.

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ದ ಧಾರಾವಾಹಿ "ಅಗ್ನಿಸಾಕ್ಷಿ" ಯ ಸಿದ್ದಾರ್ಥ್ ಪಾತ್ರಧಾರಿ ವಿಜಯ್ ಸೂರ್ಯಗೆ ಕಂಕಣ ಬಲ ಕೂಡಿ ಬಂದಿದೆ. ಪ್ರೇಮಿಗಳ ದಿನದಂದೇ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರನ್ನು ವರಿಸಿದ್ದಾರೆ.
ವಿಜಯ್ ಸೂರ್ಯ ವಿವಾಹದ ಸುದ್ದಿ ಈ ಮುನ್ನವೇ ಬಹಿರಂಗವಾಗಿತ್ತು. ಆದರೆ ಪ್ರೇಮಿಗಳ ದಿನದಂದೇ ಅವರ ವಿವಾಹ ಏರ್ಪಾಡಾಗಿದ್ದದ್ದು ವಿಶೇಷ. ಗುರು ಹಿರಿಯರು, ಕುಟುಂಬದವರ ಸಮ್ಮುಖದಲ್ಲಿ ವಿಜಯ್-ಚೈತ್ರಾ ವಿವಾಹ ನೆರವೇರೆಇದೆ.
ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ "ಅಗ್ನಿಸಾಕ್ಷಿ" ಧಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರಧಾರಿಯಾಗಿರುವ ವಿಜಯ್ ಅದೇ ಹೆಸರಿಂದ ಹೆಚ್ಚು ಚಿರಪರಿಚಿತರಾಗಿದ್ದಾರೆ. ಇನ್ನು ವಿಜಯ್ "ಇಷ್ಟಕಾಮ್ಯ", "ಕದ್ದುಮುಚ್ಚಿ" ಚಿತ್ರಗಳಲ್ಲಿ ಸಹ ಅಭಿನಯಿಸಿದ್ದಾರೆ. 
ವಿಜಯ್ ಜತೆಯಾಗಿರುವ ಚೈತ್ರಾ ಸಾಫ್ಟ್ ವೇರ್ ಉದ್ಯೋಗಿಆಗಿದ್ದು ಈ ನವಜೋಡಿ ಜೀವನ ಸಂತಸದಾಯಕವಾಗಿರಲಿ ಎಂದು ಬಂಧು – ಮಿತ್ರರು ಶುಭಹಾರೈಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT