ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ ಮೇಲೂ ಉರಿ 'ಸರ್ಜಿಕಲ್ ಸ್ಟ್ರೈಕ್'!

Srinivas Rao BV
ನವದೆಹಲಿ: 2019 ರಾಷ್ಟ್ರ, ರಾಷ್ಟ್ರೀಯತೆಯನ್ನಾಧರಿಸಿದ ಸಿನಿಮಾಗಳಿಂದ ಪ್ರಾರಂಭವಾಗಿದ್ದು ಒಂದೇ ದಿನದಲ್ಲಿ ಉರಿ ಹಾಗೂ ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರಗಳು ಬಿಡುಗಡೆಯಾಗಿವೆ. 
ಎರಡೂ ಮೂವಿಗಳೂ ರಾಷ್ಟ್ರಕ್ಕೆ ಸಂಬಂಧಪಟ್ಟಿದ್ದಾಗಿದ್ದು, ವಿಕಿ ಕೌಶಲ್ ನಟನೆಯ ಉರಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಆಧಾರಿತ ಸಿನಿಮಾ ಆಗಿದೆ. ಉರಿ ಸಿನಿಮಾ ಬಾಕ್ಸ್ ಆಫೀಸ್ ಮೇಲೆಯೂ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, ಮೊದಲನೇ ದಿನವೇ 8 ಕೋಟಿ ಗಳಿಸಿದೆ. 
ಬಾಕ್ಸ್ ಆಫೀಸ್ ವಿಶ್ಲೇಷಕರ ಪ್ರಕಾರ ಉರಿ ಚಿತ್ರ ಅದ್ಭುತವಾದ ಪ್ರಾರಂಭ ಕಂಡಿದ್ದು 2 ಹಾಗೂ 3 ನೇ ದಿನವೂ ಸಹ 8 ಕೋಟಿ ರೂಪಾಯಿ ಗಳಿಸಲಿದೆ. ಇನ್ನು ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಮೊದಲ ದಿನ 4.50 ಕೋಟಿ ರೂಪಾಯಿ ಗಳಿಸಿದೆ. 
SCROLL FOR NEXT