ಸಿನಿಮಾ ಸುದ್ದಿ

ತಾಯಿ ಪಾತ್ರಕ್ಕೆ ತಾರಾಗೆ ಬೇಡಿಕೆ, ವೈವಿಧ್ಯಮಯ ಪಾತ್ರದಲ್ಲಿ ಅಭಿನಯಿಸುವ ಹಂಬಲ

Nagaraja AB
ಹಿರೋಯಿನ್,  ಗೃಹಿಣಿ, ಸ್ನೇಹಿತೆ ಹೀಗೆ ತರಹೇವಾರಿ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ನಟಿ ತಾರಾ ವೃತ್ತಿಜೀವನದಲ್ಲಿ ಖುಷಿಯಾಗಿದ್ದಾರೆ.
ಹಸೀನಾದಲ್ಲಿನ ಉತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ವಿಜೇತರಾಗಿರುವ ತಾರಾ, ಹೆಬ್ಬೆಟ್ಟು ರಾಮಕ್ಕ, ಸಾವಿತ್ರಿ ಬಾಯಿ ಪುಲೆ ಮತ್ತಿತರ ಚಿತ್ರಗಳಲ್ಲಿಯೂ ಮನಮೋಹಕವಾಗಿ ನಟಿಸಿದ್ದಾರೆ.ಆದರೆ, ಪ್ರಸ್ತುತ ಸಂದರ್ಭದಲ್ಲಿ ಅಫೀಸರ್  ಅಥವಾ ತಾಯಿ ಪಾತ್ರಗಳೇ ಹೆಚ್ಚಾಗಿ  ನಟಿ ತಾರಾ ಅವರಿಗೆ ಹುಡುಕಿಕೊಂಡು ಬರುತ್ತಿವೆ.  
ಆದಿ ಲಕ್ಷ್ಮಿ ಪುರಾಣ ಚಿತ್ರದಲ್ಲಿ ನಟ ನಿರೂಪ್ ಭಂಡಾರಿ,  ಸಿಂಗಾ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ಏಲ್ಲಿದ್ದೆ ಇಲ್ಲಿ ತನಕ ಚಿತ್ರದಲ್ಲಿ  ಸೃಜನ್ ಲೋಕೇಶ್  ಅವರ ಎನ್ ಆರ್ ಐ  ತಾಯಿ ಪಾತ್ರದಲ್ಲಿ  ನಟಿಸಿರುವ ತಾರಾಗೆ, ಎಲ್ಲಾ ಪಾತ್ರಗಳಲ್ಲೂ ಮಗನನ್ನು ಖುಷಿಯಿಂದ ನೋಡಿಕೊಳ್ಳುವುದೇ ಕಾರ್ಯಸೂಚಿಯಾಗಿತ್ತಂತೆ. 
ಪೊಗರು, ಪಾರ್ವತಮ್ಮನ ಮಗ ಹಾಗೂ ಶಿವ ತೇಜಸ್ಸು ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ತಾರಾ ಅಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ.ಎಲ್ಲಾ ನಟರೊಂದಿಗೆ ತಾಯಿಗೆ ತೆರೆ ಹಂಚಿಕೊಂಡಿರುವ ತಾರಾಗೆ ಬೇರೆ ಪಾತ್ರಗಳು ಸಿಗುತ್ತಿರುವುದಾಗಿ ಹೇಳಿದ್ದಾರೆ.
ಇದೀಗ ಇತರ ಪಾತ್ರಗಳಲ್ಲೂ ತೆರೆ ಹಂಚಿಕೊಳ್ಳುವ ವಿಶ್ವಾಸದಲ್ಲಿ ಹಿರಿಯ ನಟಿ ತಾರಾ ಇದ್ದಾರೆ. ಹಿರೋಯಿನ್ ಆಗಬೇಕೆಂಬ ಬಯಕೆ ಇಲ್ಲ. ನನ್ನ ಪಾತ್ರ ವೀಕ್ಷಕರ ಹೃದಯ ಗೆಲ್ಲಬೇಕು. ಆ ನಿಟ್ಟಿನಲ್ಲಿ ಬೇರೆ ಬೇರೆ ಪಾತ್ರಗಳು ಸಿಕ್ಕರೆ ಅನುಕೂಲ ಎನ್ನುತ್ತಾರೆ.
ಹಿರೋಯಿನ್ ಪಾತ್ರಕ್ಕೆ ಕಾಯುತ್ತಾ ಕುಳಿತಿದ್ದರೆ ವೃತ್ತಿ ಜೀವನ ಧೀರ್ಘಾವಧಿ ಮುಂದುವರೆಯುತ್ತಿರಲಿಲ್ಲ. ಆದರೆ, ವೈವಿಧ್ಯಮಯ ಪಾತ್ರಗಳು ಸ್ಯಾಂಡಲ್ ವುಡ್ ನಲ್ಲಿ ಇನ್ನೂ ಉಳಿಯುವಂತೆ ಮಾಡಿವೆ. ಆದಾಗ್ಯೂ,  ತಾಯಿ ಅಥವಾ ಅಧಿಕಾರಿ ಪಾತ್ರಕ್ಕೆ ಮಾತ್ರ ಸೀಮಿತವಾಗಬಾರದು ಎಂಬುದು ನನ್ನ ಅನಿಸಿಕೆಯಾಗಿದೆ ಎಂದು ತಾರಾ ಹಂಚಿಕೊಂಡರು.
SCROLL FOR NEXT