ನಟಿ ರಾಗಿಣಿ ಬಾಯ್ ಫ್ರೆಂಡ್ಸ್ ನಡುವೆ ಬಡಿದಾಟ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು! 
ಸಿನಿಮಾ ಸುದ್ದಿ

ನಟಿ ರಾಗಿಣಿ ಬಾಯ್ ಫ್ರೆಂಡ್ಸ್ ನಡುವೆ ಬಡಿದಾಟ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು!

ನಟಿ ರಾಗಿಣಿ ಬಾಯ್ ಫ್ರೆಂಡ್ಸ್ ನಡುವೆ ಬಡಿದಾಟ ನಡೆದಿದ್ದು ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಟಿ ರಾಗಿಣಿ ಬಾಯ್ ಫ್ರೆಂಡ್ಸ್ ನಡುವೆ ಬಡಿದಾಟ ನಡೆದಿದ್ದು ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಾ.15 ರಂದು ರಾತ್ರಿ 11:45 ರ ವೇಳೆಯಲ್ಲಿ ರಿಟ್ಜ್ ಕಾರ್ಲ್ಟನ್ ಹೊಟೆಲ್ ನಲ್ಲಿ ಈ ಘಟನೆ ನಡೆದಿದೆ. ರಾಗಿಣಿ ಅವರು ಅವರ ಸ್ನೇಹಿತ ಸರ್ಕಾರಿ ಅಧಿಕಾರಿ ರವಿಶಂಕರ್ ಜೊತೆ ತೆರಳಿದ್ದಾಗ ರಾಗಿಣಿ ಅವರ ಹಳೆಯ ಬಾಯ್ ಫ್ರೆಂಡ್ ಶಿವಪ್ರಸಾದ್ ರವಿಶಂಕರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ಶಿವಪ್ರಸಾದ್ ವಿರುದ್ಧ ದೂರು ದಾಖಲಿಸಲಾಗಿದೆ. 
ರಿಟ್ಜ್ ಕಾರ್ಲ್ಟನ್ ಹೊಟೆಲ್ ನಲ್ಲಿ ರಾಗಿಣಿ ಅವರೊಂದಿಗೆ ರವಿಶಂಕರ್ ನ್ನು ನೋಡಿದ ಶಿವಪ್ರಸಾದ್ ರಾಗಿಣಿ ಜೊತೆ ಕಾಣಿಸಿಕೊಂಡರೆ ಕೊಲೆ ಮಾಡುವುದಾಗಿ ತನಗೆ ಶಿವಪ್ರಸಾದ್ ಬೆದರಿಕೆ ಹಾಕಿದ್ದಾರೆ ಎಂದು ರವಿಶಂಕರ್ ದೂರಿನಲ್ಲಿ ತಿಳಿಸಿದ್ದಾರೆ. 
ಪಾನಮತ್ತನಾಗಿದ್ದ ಶಿವಪ್ರಸಾದ್ ತನ್ನ ಮೇಲೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ರಾಗಿಣಿ ಜೊತೆ ಕಾಣಿಸಿಕೊಂಡಲ್ಲಿ ತನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ, ನನ್ನನ್ನು ಹತ್ಯೆ ಮಾಡಲು ಯತ್ನಿಸಿದ ಶಿವಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಪೊಲೀಸರು ರಾಗಿಣಿ ಅವರ ಹೇಳಿಕೆಯನ್ನೂ ಪಡೆದಿದ್ದಾರೆ. 
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಪಿ ಶಿವಪ್ರಸಾದ್, ರಾಗಿಣಿ ಅಂದ್ರೆ ಸಿನಿಮಾ ನಟಿ ರಾಗಿಣಿ ದ್ವಿವೇದಿ ಅಲ್ಲ, ರಾಗಿಣಿ ಅಂತ ನನಗೆ ಮತ್ತೊಬ್ಬ ಸ್ನೇಹಿತೆ ಇದ್ದಾಳೆ. ರವಿಶಂಕರ್ ಮೇಲೆ ಹಲ್ಲೆ ಮಾಡಿಲ್ಲ, ನನ್ನ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಬೆಂಗಳೂರು ಬಲು ದುಬಾರಿ: ನಮ್ ಊರಲ್ಲಿ ಬಟ್ಟೆ ಇಸ್ತ್ರಿಗೆ ಬರೀ 5 ರೂಪಾಯಿ, ಆದ್ರೆ ಇಲ್ಲಿ 20 ರೂಪಾಯಿ!: ನೊಯ್ಡಾ ನಿವಾಸಿ ಅಚ್ಚರಿ!

SCROLL FOR NEXT