ಸಿನಿಮಾ ಸುದ್ದಿ

ಅಭಿಷೇಕ್ ನಟನೆಯ ಚೊಚ್ಚಲ 'ಅಮರ್ ' ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಶುಭ ಹಾರೈಕೆ

Nagaraja AB
ಬೆಂಗಳೂರು: ದಿವಂಗತ ರೆಬೆಲ್ ಸ್ಟಾರ್ ಅಂಬರೀಷ್ ಅವರ ಸುಪುತ್ರ  ಅಭಿಷೇಕ್ ಗೌಡ ಅಭಿನಯದ ಚೊಚ್ಚಲ ಚಿತ್ರ ಅಮರ್ ನಾಳೆ ವಿಶ್ವದಾದ್ಯಂತ ತೆರೆ ಮೇಲೆ ಅಪ್ಪಳಿಸಿದೆ.ಚಿತ್ರ ಬಿಡುಗಡೆಗೂ ಮೊದಲ ಸಾಕಷ್ಟು ನಿರೀಕ್ಷೆಗಳನ್ನು  ಹುಟ್ಟು ಹಾಕಿದೆ.
ಅಂಬರೀಶ್ ಹಾಗೂ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಷ್ ನಾಯಕತ್ವದ ಅಮರ್ ಚಿತ್ರವು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಮನಃಪೂರ್ವಕವಾಗಿ ಶುಭ ಕೋರಿದ್ದಾರೆ.
ಅಂಬರೀಶ್ ಹೇಗೆ ಕನ್ನಡ ಜನರ ಹೃದಯದಲ್ಲಿ ವಿಜೃಂಭಿಸಿದ್ದಾನೋ ಅದೇ ರೀತಿಯಲ್ಲಿ ಅಭಿಷೇಕ್ ಕೂಡಾ ಸಿನಿಮಾ ರಂಗದಲ್ಲಿ ಯಶಸ್ಸನ್ನು ಪಡೆಯಲಿ ಮತ್ತು ಕರ್ನಾಟಕದ ಜನರ ಮನೆ ಮನಸ್ಸಿನಲ್ಲಿ ರಾರಾಜಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆಂದು ಅವರು ಹೇಳಿದ್ದಾರೆ.
SCROLL FOR NEXT