ಸಿನಿಮಾ ಸುದ್ದಿ

ಗೆಳೆಯನೊಡನೆ ಹಸೆಮಣೆ ಏರಿದ 'ಅಗ್ನಿಸಾಕ್ಷಿ' ನಟಿ 

Raghavendra Adiga

ಬೆಂಗಳೂರು: ಖಾಸಗಿ ವಾಹಿನಿಯ ಖ್ಯಾತ ಧಾರಾವಾಹಿ "ಅಗ್ನಿಸಾಕ್ಷಿ" ನಟಿ ಇಶಿತಾವರ್ಷ ತನ್ನ ಗೆಳೆಯನೊಡನೆ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಶಿತಾವರ್ಷ ತಮ್ಮ ಬಹುಕಾಲದ ಗೆಳೆಯ ಮುರುಗನಂದನ್ ಅವರೊಡನೆ ವಿವಾಹವಾಗಿದ್ದಾರೆ. 

"ಅಗ್ನಿಸಾಕ್ಷಿ" ಧಾರಾವಾಹಿಯಲ್ಲಿ ಮಾಯಾ ಪಾತ್ರಧಾರಿಯಾಗಿ ಜನಪ್ರಿಯವಾಗಿರುವ ನಟಿ ಇಶಿತಾವರ್ಷ ಕೊರಿಯೋಗ್ರಾಫರ್ ಆಗಿರುವ ಮುರುಗನಂದನ್ ಅವರೊಡನೆ ವೈವಾಹಿಕ ಜೀವನ ಪ್ರಾರಂಭಿಸಿದ್ದಾರೆ. ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬ ಸದಸ್ಯರು, ಸ್ನೇಹಿತರು, ಕಿರುತೆರೆ ಕಲಾವಿದರು ಸಹ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ.

SCROLL FOR NEXT