ಸಿನಿಮಾ ಸುದ್ದಿ

ವಾರ್’ ನಾಳೆ ತೆರೆಗೆ : ಬೃಹತ್ ಆಕ್ಷನ್ ಎಂಟರ್ ಟೈನರ್ ಚಿತ್ರವಾಗುವ ನಿರೀಕ್ಷೆ

Srinivas Rao BV

ನವದೆಹಲಿ: ಖ್ಯಾತ ನಟ ಹೃತಿಕ್‌ರೋಷನ್ ಹಾಗೂ ಟೈಗರ್ ಶ್ರಾಫ್ ಜತೆಯಾಗಿ ನಟಿಸಿರುವ ’ವಾರ್’ ಬುಧವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು, ಬೃಹತ್ ಅಕ್ಷನ್ ಎಂಟರ್ ಟೈನರ್ ಚಿತ್ರವಾಗಲಿದೆ ಎಂಬ ಮಾತು ಕೇಳಿಬಂದಿದೆ.

ಏತನ್ಮಧ್ಯೆ, ಚಿತ್ರದ ಟ್ವಿಸ್ಟ್ ಗಳನ್ನು ಹೊರಗೆಡಹದಂತೆ ಹೃತಿಕ್ ಹಾಗೂ ಟೈಗರ್ ತಮ್ಮ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಅತ್ಯಂತ ಕಷ್ಟಪಟ್ಟು, ರಕ್ತ, ಬೆವರು ಹರಿಸಿ ಚಿತ್ರ ಮಾಡಲಾಗಿದೆ.  ಆದ್ದರಿಂದ ಚಿತ್ರ ನೋಡಿದ ಬಳಿಕ ಅದರಲ್ಲಿನ ಕೌತುಕ, ಟ್ವಿಸ್ಟ್ ಗಳ ಬಗ್ಗೆ ಗುಟ್ಟು ಬಿಟ್ಟುಕೊಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೃತಿಕ್ ತಿಳಿಸಿದ್ದಾರೆ.

SCROLL FOR NEXT