ಕೊಡಗಿಗೆ ಸುಸಜ್ಜಿತ ಆಸ್ಪತ್ರೆ: ಪ್ರತಾಪ್ ಸಿಂಹ ಬಳಿ ಅಪ್‌ಡೇಟ್ಸ್ ಕೇಳಿದ ರಶ್ಮಿಕಾ ಮಂದಣ್ಣ! 
ಸಿನಿಮಾ ಸುದ್ದಿ

ಕೊಡಗಿಗೆ ಸುಸಜ್ಜಿತ ಆಸ್ಪತ್ರೆ: ಪ್ರತಾಪ್ ಸಿಂಹ ಬಳಿ ಅಪ್‌ಡೇಟ್ಸ್ ಕೇಳಿದ ರಶ್ಮಿಕಾ ಮಂದಣ್ಣ!

ಕೊಡಗಿನ ಬೆಡಗಿ ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹಿಂದೊಮ್ಮೆ ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆಯೊಂದರ ಅಗತ್ಯದ ಕುರಿತು ಟ್ವೀಟ್ ಮಾಡಿರುವುದು ನೆನಪಿದೆಯಷ್ಟೆ. ಇದಕ್ಕೆ ಸಂಸದ ಪ್ರತಾಪ್ ಸಿಂಹ ಸಹ ಪ್ರತಿಕ್ರಯಿಸಿದ್ದರು. ಇದೀಗ ರಶ್ಮಿಕಾ ಮತ್ತೆ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ.

ಈ ಬಾರಿ ನಟಿ ತಾವು ಈ ಹಿಂದೆ ಕೇಳಿದ್ದ ಕೊಡಗಿನ ಆಸ್ಪತ್ರೆ ಕುರಿತ ವಿಷಯದ ಬಗೆಗೆ ಅಪ್‌ಡೇಟ್ಸ್ ಏನಾದರೂ ಇದೆಯೆ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದ್ದಾರೆ.

"ಸಂಸದ ಪ್ರತಾಪ್ ಸಿಂಹ ಅವರೇ, ನಾನು ಈ ಟ್ವೀಟ್ ಮಾಡುತ್ತಿರುವುದು ಕೊಡಗಿಗೆ ಸುಸಜ್ಜಿತ ಆಸ್ಪತ್ರೆಯ ವಿಚಾರವಾಗಿ. ಈ ಬಗ್ಗೆ ಏನಾದರೂ ಅಪ್‌ಡೇಟ್ಸ್ ಸಿಗುತ್ತದೆಯೆ?ಈ ಕುರಿತ ಬೆಳವಣಿಗೆಗಳ ಸಂಬಂಧ ಏನಾದರೂ ಮಾಹಿತಿ ಲಭಿಸಿದರೆ ಸಂತೋಷವಾಗುತ್ತದೆ" ಎಂದು ರಶ್ಮಿಕಾ ತಮ್ಮ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಅದನ್ನು ಸಂಸದ ಪ್ರತಾಪ್ ಸಿಂಹ ಅವರಿಗೆ ಟ್ಯಾಗ್ ಸಹ ಮಾಡಿದ್ದಾರೆ.

ನಟಿಯ ಈ ಟ್ವೀಟ್ ಬಗೆಗೆ ಕನ್ನಡ ಪ್ರೇಮಿಗಳು ಮಾತ್ರ ಮುನಿಸಿಕೊಂಡಿದ್ದಾರೆ. "ರಶ್ಮಿಕಾ ಅವರೇ ನಿಮಗೆ ಕನ್ನಡದಲ್ಲಿ ಮಾತನಾಡಲು ಕಷ್ಟವಾಗುತ್ತದೆ, ಆದರೆ ಕನ್ನಡದಲ್ಲಿ ಟ್ವೀಟ್ ಮಾಡಿರಿ." ಎಂದಿದ್ದಾರೆ.

ಇನ್ನೂ ಕೆಲವರು ನಟಿಯ ಸಾಮಾಜಿಕ ಕಳಕಳಿಯನ್ನು ಮೆಚ್ಚಿಕೊಂಡಿದ್ದು ಕೊಡಗಿನ ಆಸ್ಪತ್ರೆ ಕುರಿತ ಆವರ ವಿಶೇಷ ಕಾಳಜಿ ಒಳ್ಳೆಯದೆಂದು ಹೇಳೀದ್ದಾರೆ.

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

SCROLL FOR NEXT