ಸಿನಿಮಾ ಸುದ್ದಿ

ಮಲಯಾಳಂ ನಟ ಕಾಳಿಂಗ ಸಸಿ ವಿಧಿವಶ

Shilpa D

ಕೋಜಿಕ್ಕೋಡ್: ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ಹಿರಿಯ ನಟ ಕಾಳಿಂಗ ಸಸಿ(59) ವಿಧಿವಶರಾಗಿದ್ದಾರೆ.

ಅಮೆನ್, ವೆಲ್ಲಿಮೂಂಗಾ, ಪಂಚಿಯೆಟ್ಟನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

1998 ರಲ್ಲಿ ಸಿನಿಮಾರಂಗಕ್ಕೆ ಸಸಿ ಕಾಲಿರಿಸಿದರು, ಅದಕ್ಕೂ ಮುನ್ನ ಸುಮಾರು 25 ವರ್ಷಗಳ ಕಾಲ ರಂಗ ಭೂಮಿಯಲ್ಲಿ ಸೇವೆ ಸಲ್ಲಿಸಿದ್ದ ಅವರು 500 ಪಾತ್ರಗಳನ್ನು ನಿರ್ವಹಸಿದ್ದರು.

ಕೋಜಿಕ್ಕೋಡ್ ನಲ್ಲಿ ಕಳಿಂಗ ಹೆಸರಿನ ರಂಗಭೂಮಿ ತಂಡ ಕಟ್ಟಿದ್ದರು. ತಾಕರಚೆಂದ ಅವರ ಮೊದಲ ಸಿನಿಮಾವಾಗಿದ್ದು, ರಂಜಿತ್ ನಟನೆಯ ಪ್ರಾಣಚೆಟ್ಟಿಯನ್ ಮೂಲಕ ಎಲ್ಲರ ಗಮನ ಸೆಳೆದಿದ್ದರು,  ಕುನ್ನಗಮಂಗಲಮ್ ನಿವಾಸಿಯದ ಸಸಿ ಪತ್ನಿ ಪ್ರಭಾವತಿ ಅವರನ್ನು ಅಗಲಿದ್ದಾರೆ.

SCROLL FOR NEXT