ಕೋಟಿಗೊಬ್ಬ 3 
ಸಿನಿಮಾ ಸುದ್ದಿ

‘ಕೋಟಿಗೊಬ್ಬ 3’ ಪೋಸ್ಟರ್ ರಿಲೀಸ್‍: ಸುದೀಪ್ ಅಭಿಮಾನಿಗಳು ಫುಲ್ ಖುಷ್

ನಿರ್ಮಾಪಕ ಸೂರಪ್ಪಬಾಬು ಜನ್ಮದಿನವಾದ ಇಂದು ನಟ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಪೋಸ್ಟರ್ ಟ್ವಿಟರ್ ಮೂಲಕ ರಿಲೀಸ್ ಆಗಿದೆ. 

ನಿರ್ಮಾಪಕ ಸೂರಪ್ಪಬಾಬು ಜನ್ಮದಿನವಾದ ಇಂದು ನಟ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಪೋಸ್ಟರ್ ಟ್ವಿಟರ್ ಮೂಲಕ ರಿಲೀಸ್ ಆಗಿದೆ. 

ಇದೇನಪ್ಪ ಫ್ಯಾಂಟಮ್' ಸುದ್ದಿಯಲ್ಲಿದೆ, ಆದರೆ 'ಕೋಟಿಗೊಬ್ಬ 3' ಚಿತ್ರದ ಸುಳಿವೇ ಇಲ್ಲವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಕಿಚ್ಚನ ಅಭಿಮಾನಿಗಳಿಗೆ ಇದು ನಿಜಕ್ಕೂ ಅಚ್ಚರಿಯಾಗಿದ್ದು, ಹೊಸ ಪೋಸ್ಟರ್ ಬಿಡುಗಡೆಯಿಂದ ಸಖತ್ ಖುಷಿಯಾಗಿದ್ದಾರೆ.

ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಜನ್ಮದಿನದಂದು ಅವರಿಗೆ ಶುಭಾಶಯ ಕೋರುವ ಮೂಲಕ ಸುದೀಪ್ ಅಭಿಮಾನಿಗಳಿಗೆ ಹೊಸ ಉಡುಗೊರೆ ನೀಡಲಾಗಿದೆ. 'ಕೋಟಿಗೊಬ್ಬ 3' ಚಿತ್ರದ ಇದುವರೆಗಿನ ಪೋಸ್ಟರ್‌ಗಳು, ಬಿಡುಗಡೆಯಾದ ಹಾಡು ಸುದೀಪ್ ಅವರ ಖದರ್ ಲುಕ್‌ಅನ್ನು ಬಿಂಬಿಸಿದ್ದವು. ಈ ಹೊಸ ಪೋಸ್ಟರ್ ಕೂಡ ಅದೇ ಬಗೆಯ ಖದರ್ ತೋರಿಸಿದೆ. 

ವಿಲನ್‌ನ ತಲೆಯನ್ನು ಎಡಗೈನಲ್ಲಿ ನೆಲಕ್ಕೆ ಒತ್ತಿ ಹಿಡಿದ ಸುದೀಪ್ ಅವರ ಒಂದು ಬದಿಯ ಪೋಸ್ ಕಂಡು ಫ್ಯಾನ್ಸ್ ಪುಳಕಿತರಾಗಿದ್ದಾರೆ. ಚಿತ್ರದ ಆಕ್ಷನ್ ಸನ್ನಿವೇಶವೊಂದರ ಪೋಸ್ಟರ್ ಇದು. ಈ ಪೋಸ್ಟರ್ ನೋಡಿದ ಅಭಿಮಾನಿಗಳು ಕಟ್ಟಡವೊಂದರ ಒಳಗೆ ನಡೆಯುವ ಮೈನವಿರೇಳಿಸುವ ಹೊಡೆದಾಟದ ದೃಶ್ಯವನ್ನು ಕಲ್ಪಿಸಿಕೊಂಡು ರೋಮಾಂಚಿತರಾಗುತ್ತಿದ್ದಾರೆ.

ಸೂರಪ್ಪ ಬಾಬು ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ಸುದೀಪ್, ಸಂತೋಷ ಮತ್ತು ಆರೋಗ್ಯ ಸದಾ ಇರಲಿ ಎಂದು ಹಾರೈಸಿದ್ದಾರೆ. 'ಕೋಟಿಗೊಬ್ಬ 3' ಚಿತ್ರತಂಡ ಹಾಗೂ ಸುದೀಪ್ ಅಭಿಮಾನಿಗಳು ಸಹ ಸೂರಪ್ಪ ಬಾಬು ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಕೋಟಿಗೊಬ್ಬ ಚಿತ್ರ ಸರಣಿಯ ಮೂರನೇ ಭಾಗ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 'ಪ್ರೇಮಮ್' ಖ್ಯಾತಿಯ ಮಡೋನ್ನಾ ಸೆಬಾಸ್ಟಿಯನ್ ಸುದೀಪ್‌ಗೆ ಎದುರಾಗಿ ನಟಿಸಿದ್ದಾರೆ. ಬಾಲಿವುಡ್‌ನ ನಟರಾದ ಅಫ್ತಾಬ್ ಶಿವ್‌ದಾಸಾನಿ, ಶ್ರದ್ಧಾ ದಾಸ್ ಮತ್ತು ನವಾಬ್ ಶಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವಕಾರ್ತಿಕ್ ನಿರ್ದೇಶನದ ಚಿತ್ರವನ್ನು ಯುರೋಪ್ ಮತ್ತು ಭಾರತದಲ್ಲಿ ಚಿತ್ರೀಕರಿಸಲಾಗಿದೆ. ಕನ್ನಡದ ಜತೆಗೆ ತಮಿಳು ಮತ್ತು ತೆಲುಗಿನಲ್ಲಿಯೂ ಈ ಚಿತ್ರ ತೆರೆಕಾಣಲಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel