ಚಿತ್ರದ ಮೋಶನ್ ಪೋಸ್ಟರ್ 
ಸಿನಿಮಾ ಸುದ್ದಿ

'ರಜನಿ v/s ವೈಲ್ಡ್' ಸದ್ಯದಲ್ಲಿಯೇ ಡಿಸ್ಕವರಿ ಚಾನೆಲ್ ನಲ್ಲಿ: ತಲೈವಾ ಅಭಿಮಾನಿಗಳಿಗೆ ಸಿಹಿಸುದ್ದಿ 

ಇದು ತಲೈವಾ, ರಜನಿಕಾಂತ್ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಸಾಹಸಿ ಬೇರ್ ಗ್ರಿಲ್ಸ್ ಡಿಸ್ಕವರಿ ಚಾನೆಲ್ ಗೆ ನಡೆಸಿಕೊಡುವ ಪ್ರಖ್ಯಾತ ಟಿ ವಿ ಶೋ 'ಇಂಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ನಲ್ಲಿ ರಜನಿಕಾಂತ್ ಭಾಗವಹಿಸಿದ ಸರಣಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ.

ಇದು ತಲೈವಾ, ರಜನಿಕಾಂತ್ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಸಾಹಸಿ ಬೇರ್ ಗ್ರಿಲ್ಸ್ ಡಿಸ್ಕವರಿ ಚಾನೆಲ್ ಗೆ ನಡೆಸಿಕೊಡುವ ಪ್ರಖ್ಯಾತ ಟಿ ವಿ ಶೋ 'ಇಂಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ನಲ್ಲಿ ರಜನಿಕಾಂತ್ ಭಾಗವಹಿಸಿದ ಸರಣಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ.


ಈ ಬಗ್ಗೆ ಸ್ವತಃ ಬೇರ್ ಗ್ರಿಲ್ಸ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಮತ್ತು ರಜನಿಕಾಂತ್ ವಿಶೇಷ ಗೆಟಪ್ ನಲ್ಲಿ ಕಾಡಿನಲ್ಲಿ ಜೀಪ್ ಮುಂದೆ ನಿಂತುಕೊಂಡಿರುವಂತೆ ಮೋಶನ್ ಪೋಸ್ಟರ್ ನ್ನು ಬಿಡುಗಡೆ ಮಾಡಿದ್ದಾರೆ. 


''ವಿಶ್ವಾದ್ಯಂತ ಹಲವು ಸ್ಟಾರ್ ಗಳ ಜೊತೆ ಕೆಲಸ ಮಾಡಿದ್ದೇನೆ, ಆದರೂ ಇದು ನನಗೆ ವಿಶೇಷ, ಲವ್ ಇಂಡಿಯಾ'' ಎಂದು ಬರೆದುಕೊಂಡಿದ್ದಾರೆ. ರಜನಿಕಾಂತ್ ಅವರನ್ನು ಸ್ವೇಗರ್ ಎಂದು ಕರೆದಿರುವ ಗ್ರಿಲ್ಸ್ , ಕಾಡಿನಲ್ಲಿ ಎಲ್ಲವೂ ವಿಭಿನ್ನವಾಗಿರುತ್ತದೆ. ಅಷ್ಟು ದೊಡ್ಡ ನಟನ ಜೊತೆಗೆ ಕಳೆದ ಸಮಯ ತುಂಬಾ ವಿನೋದವಾಗಿತ್ತು, ಅವರನ್ನಿಲ್ಲಿ ಸಂಪೂರ್ಣ ಭಿನ್ನವಾಗಿ ನೀವು ನೋಡಬಹುದು ಎಂದಿದ್ದಾರೆ. ಆದರೆ ಈ ಸರಣಿ ಯಾವ ದಿನಾಂಕದಂದು ಪ್ರಸಾರವಾಗಲಿದೆ ಎಂದು ಹೇಳಿಲ್ಲ.


ರಜನಿಕಾಂತ್ ಸರಣಿಯನ್ನು ಕರ್ನಾಟಕದ ಬಂಡೀಪುರ ಮೀಸಲು ಅರಣ್ಯದಲ್ಲಿ ಕಳೆದ ತಿಂಗಳು ಚಿತ್ರೀಕರಿಸಲಾಗಿತ್ತು. ಒಟ್ಟು 14 ಕಂತುಗಳಲ್ಲಿ ಪ್ರಸಾರವಾಗಲಿದ್ದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಭಾಗಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel