ಸಿನಿಮಾ ಸುದ್ದಿ

ಜನವರಿ 19 ರಂದು ಸಲಗ ಟೀಸರ್ ರಿಲೀಸ್ ಮಾಡಲಿದ್ದಾರೆ ಉಪೇಂದ್ರ

Shilpa D

ಬೆಂಗಳೂರು: ದುನಿಯಾ ವಿಜಯ್‌ ನಿರ್ದೇಶಿಸಿ, ನಟಿಸಿರುವ ‘ಸಲಗ’ ಮತ್ತೊಂದು ಸದ್ದು ಮಾಡುವುದಕ್ಕೆ ಹೊರಟಿದೆ.

ಜ. 20ರಂದು ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಜ.19ರ ಮಧ್ಯರಾತ್ರಿ ಅದ್ದೂರಿಯಾಗಿ ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಂಡಿದ್ದಾರೆ ನಿರ್ಮಾಪಕ ಕೆ ಪಿ ಶ್ರೀಕಾಂತ್‌.

ವಿಶೇಷ ಅಂದರೆ ಮಧ್ಯ ರಾತ್ರಿ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಆಗಮಿಸುತ್ತಿರುವುದು ನಟ ಉಪೇಂದ್ರ. 

ಓಂ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಭೂಗತ ಲೋಕವನ್ನು ಪರಿಚಯಿಸಿದ ಕೀರ್ತಿ ಉಪೇಂದ್ರ ಅವರದ್ದು. ಈಗ ದುನಿಯಾ ವಿಜಯ್‌ ಕೂಡ, ಭೂಗತ ಲೋಕದ ಕತೆಯನ್ನು ಒಳಗೊಂಡ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಉಪ್ಪಿ ಟೀಸರ್‌ ಬಿಡುಗಡೆ ಮಾಡುತ್ತಿದ್ದಾರೆ.

SCROLL FOR NEXT