ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಕೊರೋನಾ ಗೆದ್ದು ಬಂದ ಆ್ಯಕ್ಷನ್ ಪ್ರಿನ್ಸ್: ಅಣ್ಣನ ಆಶೀರ್ವಾದ ಎಂದ ಧ್ರುವ ಸರ್ಜಾ

ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಶಂಕರ್ ಈಗ ಸೋಂಕಿನಿಂದ ಗುಣಮುಖರಾಗಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್‌ ಫಲಿತಾಂಶ ಬಂದಿದೆ.

ಧ್ರುವ ಸರ್ಜಾ ಮತ್ತು ಪ್ರೇರಣಾ
Shilpa D
Updated On : 23 Jul 2020, 12:22 pm

ಬೆಂಗಳೂರು: ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಶಂಕರ್ ಈಗ ಸೋಂಕಿನಿಂದ ಗುಣಮುಖರಾಗಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್‌ ಫಲಿತಾಂಶ ಬಂದಿದೆ.

ಜುಲೈ 15ರಂದು ಧ್ರುವ 'ನಾನು ಮತ್ತು ನನ್ನ ಪತ್ನಿಗೆ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆದರೆ ತುಂಬ ಕಡಿಮೆ ಲಕ್ಷಣಗಳಿವೆ. ಹೀಗಾಗಿ ನಾವು ಆಸ್ಪತ್ರೆಗೆ ದಾಖಲಾಗಿದ್ದೇವೆ. ಬೇಗ ಹುಷಾರಾಗುವ ನಂಬಿಕೆಯಿದೆ. ನಮ್ಮ ಜೊತೆ ಯಾರೆಲ್ಲಾ ಸಂಪರ್ಕದಲ್ಲಿದ್ದೀರೋ ಅವರೆಲ್ಲ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಿ, ಹುಷಾರಾಗಿ' ಎಂದು ‌ಟ್ವಿಟರ್‌ನಲ್ಲಿ ಮನವಿ ಮಾಡಿದ್ದರು.

'ನನ್ನ ಮತ್ತು ನನ್ನ ಪತ್ನಿಯ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಬಹುಶಃ ಇದಕ್ಕೆ ಕಾರಣ ನನ್ನ ಅಣ್ಣ ಚಿರಂಜೀವಿ ಸರ್ಜಾ ಅವರ ಆಶೀರ್ವಾದವೇ ಇರಬೇಕು. ನನ್ನೆಲ್ಲ ಪರಿಸ್ಥಿತಿಯಲ್ಲಿಯೂ ಸದಾ ನನಗೆ ಬೆಂಬಲವಾಗಿರುವ ನನ್ನ ಅಂಕಲ್‌ ಅರ್ಜುನ್ ಸರ್ಜಾ ಅವರಿಗೆ ಧನ್ಯವಾದಗಳು. ಡಾ. ಸುರ್ಜಿತ್ ಪಾಲ್‌ ಸಿಂಗ್ ಮತ್ತು ವೈದ್ಯಕೀಯ ಸಹಾಯಕ ರಾಜ್‌ಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement