ಯೂ ಟರ್ನ್ ಸಿನಿಮಾ ಸ್ಚಿಲ್ 
ಸಿನಿಮಾ ಸುದ್ದಿ

ಫಿಲಿಫೀನ್ಸ್‌ ಗೆ ತೆರಳಲು ಸಜ್ಜಾಯ್ತು ಪವನ್ ಕುಮಾರ್ 'ಯೂಟರ್ನ್'

ಕನ್ನಡದಲ್ಲಿ ಭರ್ಜರಿ ಹಿಟ್ ಎನಿಸಿಕೊಂಡು ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ ಪವನ್ ಕುಮಾರ್ ನಿರ್ದೇಶನದ 'ಯೂ-ಟರ್ನ್' ಸಿನಿಮಾ ಫಿಲಿಫೀನ್ಸ್‌ ಗೆ ತೆರಳಲು ಸಜ್ಜಾಗಿದೆ. 

ಕನ್ನಡದಲ್ಲಿ ಭರ್ಜರಿ ಹಿಟ್ ಎನಿಸಿಕೊಂಡು ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ ಪವನ್ ಕುಮಾರ್ ನಿರ್ದೇಶನದ 'ಯೂ-ಟರ್ನ್' ಸಿನಿಮಾ ಫಿಲಿಫೀನ್ಸ್‌ ಗೆ ತೆರಳಲು ಸಜ್ಜಾಗಿದೆ. 

ಯೂ-ಟರ್ನ್ ಚಿತ್ರವು ಈಗಾಗಲೇ ತೆಲುಗು-ತಮಿಳು ಭಾಷೆಗೆ ರೀಮೇಕ್ ಆಗಿ ಮೆಚ್ಚುಗೆ ಗಳಿಸಿದ್ದು, ಫಿಲಿಫೀನ್‌ ನ ಎಬಿಎಸ್-ಸಿಬಿಎನ್ ನಿರ್ಮಾಣ ಸಂಸ್ಥೆಯು ಯೂ-ಟರ್ನ್ ಸಿನಿಮಾವನ್ನು ರಿಮೇಕ್ ಮಾಡಲು ಸಿದ್ಧವಾಗಿದ್ದು, ನಟರನ್ನೂ ಘೋಷಣೆ ಮಾಡಿಯಾಗಿದೆ.

ಫಿಲಿಫೀನ್‌ನ ಖ್ಯಾತ ನಿರ್ದೇಶಕ ಡೆರಿಕ್ ಕ್ಯಾಬ್ರಿಡೊ ಎಂಬುವರು ಯೂ-ಟರ್ನ್ ಚಿತ್ರವನ್ನು ರೀಮೇಕ್ ಮಾಡಲಿದ್ದಾರೆ. ಕಿಂ ಚ್ಯು, ಡಿ ಗುಜ್‌ಮನ್, ಟೋನಿ ಲ್ಯಾಬ್ರುಸ್ಕಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅಲ್ಲಿ ಖ್ಯಾತ ನಟಿಯರಾದ ಸಮಂತಾ ಅಕ್ಕಿನೇನಿ ಮತ್ತು ಭೂಮಿಕಾ ಚಾವ್ಲಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಮಲೆಯಾಳಂ ನಲ್ಲಿ ಕೇರ್‌ಫುಲ್ ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಮೆಚ್ಚುಗೆ ಗಳಿಸಿತ್ತು.

ಚೀನಾ ಮತ್ತು ತಾಯ್ ಭಾಷೆಗಳಲ್ಲೂ ಯೂ ಟರ್ನ್ ಸಿನಿಮಾ ರಿಮೇಕ್ ಮಾಡುವ ಸಾಧ್ಯತೆಯಿದೆ.  ಈ ಸಂಬಂಧ ಚರ್ಚೆಗಳು ಮುಂದುವರಿದಿದೆ ಎಂದು ನಿರ್ದೇಶಕ ಪವನ್ ಕುಮಾರ್ ತಿಳಿಸಿದ್ದಾರೆ.

ನಿಮ್ಮ ಸಿನಿಮಾವೊಂದು ಬೇರೆ ಭಾಷೆಯಲ್ಲಿ ರಿಮೇಕ್ ಆಗುತ್ತದೆ ಎಂದರೇ ಅದಕ್ಕಿಂತ ಸಂತೋಷದ ಸುದ್ದಿ ಬೇರೋಂದಿಲ್ಲ, ಒಬ್ಬ ನಿರ್ದೇಶಕನಿಗಿಂತ ನನಗೆ ಬರಹಗಾರನಾಗಿ ತುಂಬಾ ಹೆಮ್ಮೆ ಎನಿಸುತ್ತದೆ, ನೈಜ ಘಟನೆ ಆಧರಿಸಿ ಸಿನಿಮಾ ಕಥೆ ಬರೆದಿದ್ದೆ. ಬೇರೊಂದು ದೇಶಕ್ಕೂ ಈ ಕಥೆ ಕನೆಕ್ಟ್ ಆಗುತ್ತದೆ ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ ಎಂದು ಪವನ್ ಹೇಳಿದ್ದಾರೆ. 

ಇದರಲ್ಲಿನ ಉತ್ತಮವಾದ ಅಂಶವೆಂದರೆ ನಾವು ಯಾವುದೇ ಭಾಷೆಯ ಚಲನಚಿತ್ರ ನಿರ್ಮಾಪಕರನ್ನು  ಸಿನಿಮಾ ರಿಮೇಕ್ ಮಾಡುವಂತೆ ಕೇಳಲಿಲ್ಲ, ಅವರಾಗೇ ಆಸಕ್ತಿ ತೋರಿಸಿದರು ಮತ್ತು ನಮ್ಮಯೂ ಟರ್ನ್  ರಿಮೇಕ್ ಹಕ್ಕುಗಳನ್ನು ಕೇಳಿದ್ದಾರೆ ಎಂದು ಪವನ್  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್