ಸಿನಿಮಾ ಸುದ್ದಿ

ಅಪ್ಪನಿಗೆ ಐರಾಳ ಸ್ಪೂನ್ ಫೀಡ್: ಮಗಳ ವಿಡಿಯೋ ಹಂಚಿಕೊಂಡ ನಟ ಯಶ್ 

ಕೊರೋನಾ ವೈರಾಣು ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ರಾಜ್ಯ ಸ್ತಬ್ಧವಾಗಿದೆ. ಸಿನಿಮಾ, ಸೀರಿಯಲ್ ಎಲ್ಲವೂ ಕ್ಯಾನ್ಸಲ್ ಆಗಿರುವ ಪರಿಣಾಮ ಸ್ಟಾರ್ ನಟ-ನಟಿಯರು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ.

ಬೆಂಗಳೂರು: ಕೊರೋನಾ ವೈರಾಣು ನಿಯಂತ್ರಿಸುವ ನಿಟ್ಟಿನಲ್ಲಿ ಇಡೀ ರಾಜ್ಯ ಸ್ತಬ್ಧವಾಗಿದೆ. ಸಿನಿಮಾ, ಸೀರಿಯಲ್ ಎಲ್ಲವೂ ಕ್ಯಾನ್ಸಲ್ ಆಗಿರುವ ಪರಿಣಾಮ ಸ್ಟಾರ್ ನಟ-ನಟಿಯರು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೂಡ ಇದಕ್ಕೆ ಹೊರತಾಗಿಲ್ಲ. ಸಂಪೂರ್ಣ ಸಮಯವನ್ನು ಕುಟುಂಬಕ್ಕೆ ಮೀಸಲಿಡುವ ಸಮಯಾವಕಾಶವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. 

ಇದಕ್ಕೆ ಕಾರಣ ಪುಟ್ಟ ಕಂದ ಐರಾ. ಹೌದು. ಅವಳೊಂದಿಗೆ ಆಡುತ್ತ, ಆಟವಾಡಿಸುತ್ತ, ಮಗನ ಆಟಪಾಟ ನೋಡುತ್ತ ಯಶ್ ಆರಾಮವಾಗಿದ್ದಾರೆ. ಐರಾ ಹೇಳಿದ ಹಾಗೇ ಯಶ್ ಕೇಳುತ್ತಿದ್ದಾರೆ. ಅಪ್ಪನಿಗೆ ಐರಾ ಸ್ಪೂನ್ ಫೀಡ್ ಮಾಡಿಸುತ್ತಿದ್ದಾಳೆ. ನೀನು ತಿಂದರೆ ಮಾತ್ರ ತಿನ್ನುತ್ತೇನೆ ಎಂದು ಯಶ್ ಹೇಳುತ್ತಿದ್ದಾರೆ. ಆದರೆ ಐರಾಗೆ ತಿನ್ನಿಸೋಕೆ ಯಶ್ ಹರಸಾಹಸ ಪಟ್ಟರೂ ವರ್ಕೌಟ್ ಆಗಿಲ್ಲ. ಐರಾ ಮಾತ್ರ ಅಪ್ಪನಿಗೆ ಮತ್ತೆ ಮತ್ತೆ ತಿನ್ನಿಸಿದ್ದಾಳೆ.

ಇದನ್ನು ರಾಧಿಕಾ ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಪ್ಪ- ಮಗಳ ಬಾಂಧವ್ಯದ ಈ ಸನ್ನಿವೇಶಕ್ಕೆ ಫ್ಯಾನ್ಸ್ ದಿಲ್ ಖುಷ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೂ 7 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದು, 5 ಸಾವಿರಕ್ಕೂ ಹೆಚ್ಚಿನ ಜನರು ಕಮೆಂಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ