ನಿರಂಜನ್ ನಟನೆಯ ಸೂಪರ್ ಸ್ಟಾರ್ ನಲ್ಲಿ ಸುಂದರ್ ಮೂಗೂರ್ ಗೆ ಪ್ರಮುಖ ಪಾತ್ರ 
ಸಿನಿಮಾ ಸುದ್ದಿ

ನಿರಂಜನ್ ನಟನೆಯ 'ಸೂಪರ್ ಸ್ಟಾರ್' ನಲ್ಲಿ ಸುಂದರ್ ಮೂಗೂರ್ ಗೆ ಪ್ರಮುಖ ಪಾತ್ರ

ನೃತ್ಯ ನಿರ್ದೇಶಕ ಸುಂದರ್ ಮೂಗೂರ್ ಗೆ ನಿರಂಜನ್ ಹಿರೋ ಆಗಿ ನಟಿಸುತ್ತಿರುವ ಮೊದಲ ಚಿತ್ರ ಸೂಪರ್ ಸ್ಟಾರ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ನೃತ್ಯ ನಿರ್ದೇಶಕ ಸುಂದರ್ ಮೂಗೂರ್ ಗೆ ನಿರಂಜನ್ ಹಿರೋ ಆಗಿ ನಟಿಸುತ್ತಿರುವ ಮೊದಲ ಚಿತ್ರ ಸೂಪರ್ ಸ್ಟಾರ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಸೂಪರ್ ಸ್ಟಾರ್ ಸಿನಿಮಾಗಾಗಿ ಅತ್ಯುತ್ತಮ ತಾರಾಗಣವನ್ನು ಸಂಯೋಜಿಸಿದ್ದು, ನಿರ್ದೇಶಕ-ನಟ ಪ್ರಭುದೇವ ಅವರ ತಂದೆ ಖ್ಯಾತ ನೃತ್ಯ ನಿರ್ದೇಶಕ ಸುಂದರ್ ಮೂಗೂರು ಅವರನ್ನು ಪಾತ್ರ ನಿರ್ವಹಿಸಲು ಒಪ್ಪಿಸುವಲ್ಲಿ ಸೂಪರ್ ಸ್ಟಾರ್ ಚಿತ್ರ ತಂಡ ಯಶಸ್ವಿಯಾಗಿದೆ.

ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆಯೇ ಡಿಸೆಂಬರ್ ನಲ್ಲಿ ಪ್ರಾರಂಭವಾಗುತ್ತಿದ್ದು, ಚಿತ್ರೀಕರಣದಲ್ಲಿ ಸುಂದರ್ ಮೂಗೂರ್ ಇರಲಿದ್ದಾರೆ.

ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ನಿರಂಜನ್ ನೃತ್ಯಗಾರನ ಪಾತ್ರದಲ್ಲಿ ನಟಿಸಿದ್ದು, ನೃತ್ಯ ಕ್ಷೇತ್ರದಲ್ಲೇ ಸೂಪರ್ ಸ್ಟಾರ್ ಆಗುವ ಕಥಾಹಂದರ ಹೊಂದಿದೆ. ಸಿನಿಮಾದ ಮೊದಲ ಟೀಸರ್ ಆ.20 ರಂದು ಬಿಡುಗಡೆಯಾಗಿ, ಭಾರಿ ನಿರೀಕ್ಷೆ, ಕುತೂಹಲ ಮೂಡಿಸಿತ್ತು.

ಈ ವರೆಗೂ ಶೇ.20 ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದ್ದು, ನಾಯಕ ನಟಿ ಹಾಗೂ ಇನ್ನಿತರ ಕಲಾವಿದಾ ಆಯ್ಕೆ ಬಾಕಿ ಇದೆ.  ರಮೇಶ್ ಚಿತ್ರಕಥೆ ಬರೆದಿದ್ದು, ಆರ್ ವಿಬಿ ಸಿನಿಮಾ ಬ್ಯಾನರ್ ನ ಅಡಿ ಮೈಲಾರಿ ಪ್ರೊಡಕ್ಷನ್ ಸಹಯೋಗದಲ್ಲಿ ಚಿತ್ರ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸೂಪರ್ ಸ್ಟಾರ್ ಗೆ ರಾಘವೇಂದ್ರ ವಿ. ಯೋಗಿ ಅವರ ನೃತ್ಯ ನಿರ್ದೇಶನವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?