ಮುಖೇಶ್ ರಿಷಿ ಪುನೀತ್ ರಾಜ್‌ಕುಮಾರ್ 
ಸಿನಿಮಾ ಸುದ್ದಿ

'ಜೇಮ್ಸ್' ತಂಡಕ್ಕೆ ಬಹುಭಾಷಾ ನಟ ಮುಖೇಶ್ ರಿಷಿ ಸೇರ್ಪಡೆ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ "ಜೇಮ್ಸ್" ಚಿತ್ರದ ಪಾತ್ರವರ್ಗ ದಿನದಿನಕ್ಕೂ ಹಿಗ್ಗುತ್ತಿದೆ. ಇದೀಗ ನಟ ಮುಖೇಶ್ ರಿಷಿ ಪುನೀತ್ ಅವರ ಈ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ "ಜೇಮ್ಸ್" ಚಿತ್ರದ ಪಾತ್ರವರ್ಗ ದಿನದಿನಕ್ಕೂ ಹಿಗ್ಗುತ್ತಿದೆ. ಇದೀಗ ನಟ ಮುಖೇಶ್ ರಿಷಿ ಪುನೀತ್ ಅವರ ಈ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ,

"ಜೇಮ್ಸ್" ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವಾಗಿದ್ದು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ.ಕಿಶೋರ್ ಪಾತಿಕೊಂಡ ನಿರ್ಮಾಣದ ಈ ಚಿತ್ರದಲ್ಲಿ ಬಾಲಿವುಡ್ ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಚಿರಪರಿಚಿತವಾಗಿರುವ ಬಹುಭಾಷಾ ಕಲಾವಿದರಾದ ಮುಖೇಶ್ ಕೂಡ ತೆರೆ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಪವರ್ ಸ್ಟಾರ್ ಅವರೊಂದಿಗೆ ಅನು ಪ್ರಭಾಕರ್, ಶ್ರೀಕಾಂತ್ ಮತ್ತು ಆದಿತ್ಯ ಮೆನನ್ ಸಹ ಇದ್ದಾರೆ. ನವೆಂಬರ್ 25 ರಂದು ಬೆಂಗಳೂರಿನಲ್ಲಿ"ಜೇಮ್ಸ್" ಚಿತ್ರದ ಮೂರನೇ ಶೆಡ್ಯೂಲ್ ಪ್ರಾರಂಬವಾಗಲಿದೆ. ಈ ವೇಳೆ ಮುಖೇಶ್ ಸಹ ಶೂಟಿಂಗ್ ಸೆಟ್ ಗೆ ಸೇರಿಕೊಳ್ಳಲಿದ್ದಾರೆ.

"ಜೇಮ್ಸ್" ನಿರ್ದೇಶಕ ಚೇತನ್ ಅವರ ನಾಲ್ಕನೇ ಚಿತ್ರವಾಗಿದ್ದು ಈ ಚಿತ್ರದಲ್ಲಿ "ರಾಜಕುಮಾರ" ಜೋಡಿಯಾದ ಪುನೀತ್ ಹಾಗೂ ಪ್ರಿಯಾ ಆನಂದ್ ಮತ್ತೊಮ್ಮೆ ತೆರೆ ಮೇಲೆ ಒಂದಾಗಿದ್ದಾರೆ. ಪ್ರಿಯಾ ಈ ಚಿತ್ರದಲ್ಲಿ ಕೆಲ ಸನ್ನಿವೇಶ್ಗಳಲ್ಲಿ ತಮ್ಮ ಸಾಕು ನಾಯಿಯನ್ನೂ ಸಹ ನಟನೆಗಿಳಿಸಿದ್ದಾರೆ. ಚರಣ್ ರಾಜ್ ಸಂಗೀತ ಈ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!