ಪ್ರಭುದೇವ 
ಸಿನಿಮಾ ಸುದ್ದಿ

ನಟ ಪ್ರಭುದೇವ ಎರಡನೇ ವಿವಾಹ: ಸ್ಪಷ್ಟನೆ ನೀಡಿದ ಸೋದರ ರಾಜು ಸುಂದರಂ

ನಟ ಹಾಗೂ ಕೊರಿಯೋಗ್ರಾಫರ್ ಪ್ರಭುದೇವ ಎರಡನೇ ಮದುವೆ ಸುದ್ದಿಯ ಬಗ್ಗೆ ಅವರ ಸಹೋದರ ರಾಜು ಸುಂದರಂ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ: ನಟ ಹಾಗೂ ಕೊರಿಯೋಗ್ರಾಫರ್ ಪ್ರಭುದೇವ ಎರಡನೇ ಮದುವೆ ಸುದ್ದಿಯ ಬಗ್ಗೆ ಅವರ ಸಹೋದರ ರಾಜು ಸುಂದರಂ ಸ್ಪಷ್ಟನೆ ನೀಡಿದ್ದಾರೆ.

ಪ್ರಭುದೇವ ಮದುವೆ ವಿಚಾರವನ್ನು ಅವರ ಸಹೋದರ ರಾಜು ಸುಂದರಂ ಖಚಿತಪಡಿಸಿದ್ದಾರೆ. ಹುಡುಗಿ ಹೆಸರು ಡಾ. ಹಿಮಾನಿ . ನೃತ್ಯ ಮಾಡುವಾಗ ಪ್ರಭುದೇವಗೆ ಆಗಾಗ ಬೆನ್ನು ನೋವು ಹಾಗೂ ಕಾಲು ನೋವು ಕಾಣಿಸಿಕೊಳ್ಳುತ್ತಿದ್ದು ಡಾ.ಹಿಮಾನಿ ಚಿಕಿತ್ಸೆ ನೀಡುತ್ತಿದ್ದರು. ಈ ಸಮಯದಲ್ಲಿ ಅವರಿಬ್ಬರ ನಡುವೆ ಪ್ರೇಮ ಹುಟ್ಟಿತ್ತು.

ಈಗಾಗಲೇ ಎರಡು ತಿಂಗಳಿಂದ ಪ್ರಭುದೇವ ಹಾಗೂ ಹಿಮಾನಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಸಹೋದರ ನೀಡಿರುವ ಮಾಹಿತಿ ಪ್ರಕಾರ ಮದುವೆ ಪ್ರಭುದೇವ ಮನೆಯಲ್ಲಿಯೇ ಆಗಿದ್ದು ಆಪ್ತರು ಮಾತ್ರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

ಮೈಸೂರಿನ ನಿವಾಸದಲ್ಲಿ ಎರಡು ಬಾರಿ ಹಿಮಾನಿ ಪ್ರಭುದೇವ ಅವರ ಪೋಷಕರನ್ನು ಭೇಟಿ ಮಾಡಿದ್ದಾರೆ. ಹಿಮಾನಿ ಪೋಷಕರನ್ನು ಭೇಟಿ ಮಾಡಲು ಪ್ರಭುದೇವ ಆಗಸ್ಟ್‌ನಲ್ಲಿ ಮುಂಬೈಗೆ ತೆರಳಿದರು ಎನ್ನಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಇಲ್ಲ ಪರಿಣಾಮ ಎದುರಿಸಬೇಕಾಗುತ್ತದೆ: ಕಾಂಗ್ರೆಸ್ ಗೆ 'ಅಹಿಂದ' ಎಚ್ಚರಿಕೆ

ಮಮತಾಗೆ ಮತ್ತೊಂದು ಶಾಕ್; ಪಕ್ಷದ ಎಲ್ಲಾ ಹುದ್ದೆಗಳಿಗೆ ಸಂಸದೆ ಕಾಕೋಲಿ ಘೋಷ್ ರಾಜೀನಾಮೆ

ಮಮತಾಗೆ ಬಿಗ್ ಶಾಕ್; TMC ವಿಭಜನೆ? ತೃಣಮೂಲ ಕಾಂಗ್ರೆಸ್ ನ 50 ಶಾಸಕರು, 20 ಸಂಸದರು ಬಿಜೆಪಿ ಸೇರ್ಪಡೆ?

KPCC ಮೇಜರ್ ಸರ್ಜರಿ: ನಟಿ ಭಾವನಾ, ನಿಕೇತ್ ರಾಜ್ ಮೌರ್ಯ ಸೇರಿ 31 ಪದಾಧಿಕಾರಿಗಳಿಗೆ ಗೇಟ್‌ಪಾಸ್‌!

SCROLL FOR NEXT