ಸಿನಿಮಾ ಸುದ್ದಿ

ಸ್ಪಿನ್ ದೈತ್ಯ ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಲ್ಲಿ ವಿಜಯ್ ಸೇತುಪತಿ!

Raghavendra Adiga

ತಮಿಳು ಚಿತ್ರನಟ ವಿಜಯ್ ಸೇತುಪತಿ ಇದೀಗ ಶ್ರೀಲಂಕಾ ಆಟಗಾರ ಮುತ್ತಯ್ಯ ಮುರಳೀಧರನ್ ಆಗುತ್ತಿದ್ದಾರೆ! ಸ್ಪಿನ್ ದೈತ್ಯ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ನಲ್ಲಿ ವಿಜಯ್ ಅಭಿನಯಿಸುತ್ತಿದ್ದು ಈ ಚಿತ್ರದ ಅನೌನ್ಸಿಂಗ್ ಪೋಸ್ಟರ್​​ ಇಂದು ರಿಲೀಸ್ ಆಗಿದೆ.

"ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ನಲ್ಲಿ ನಟಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿ. ಆ ಬಗ್ಗೆ ಶೀಘ್ರವೇ ಅಪ್ ಡೇಟ್ಸ್ ನೀಡುವೆ" ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ,

ಇನ್ನು ಮೂಲತಃ ತಮಿಳುನಾಡಿನ ಹಿಂದೂ ಕುಟುಂಬದವರಾದ ಮುರಳೀಧರನ್ ಅವರ ಪತ್ನಿ ಸಹ ತಮಿಳುನಾಡಿಗೆ ಸೇರಿದ್ದಾರೆ. ಅಲ್ಲದೆ ತಮಿಳುನಾಡು ಹಾಗೂ ಭಾರತದಾದ್ಯಂತೆ ಮುರಳೀಧರನ್ ಅವರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ.

SCROLL FOR NEXT