ಅರ್ಚನಾ ಜೋಯಿಸ್ 
ಸಿನಿಮಾ ಸುದ್ದಿ

ಮುಂಗಾರುಮಳೆ 2 ನಿರ್ಮಾಪಕರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್

ಕೆಜಿಎಫ್ ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಮನೆಮಾತಾಗಿದ್ದ ಅರ್ಚನಾ ಜೋಯಿಸ್, ಈಗ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಸದ್ದಿಲ್ಲದೆ ತಯಾರಿ ನಡೆಸಿದ್ದಾರೆ.

ಕೆಜಿಎಫ್ ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಮನೆಮಾತಾಗಿದ್ದ ಅರ್ಚನಾ ಜೋಯಿಸ್, ಈಗ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಸದ್ದಿಲ್ಲದೆ ತಯಾರಿ ನಡೆಸಿದ್ದಾರೆ.

ಇ.ಕೆ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಜಿ.ಗಂಗಾಧರ್ ಅವರ ನಿರ್ಮಾಣದ ಹೊಸ ಚಿತ್ರ '#ಮ್ಯೂಟ್ ನಲ್ಲಿ ಅರ್ಚನಾ ಜೋಯಿಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಜಿ. ಗಂಗಾಧರ್ ಅವರು ಮುಂಗಾರುಮಳೆ ಹಾಗೂ ಮೊಗ್ಗಿನ ಮನಸು ಚಿತ್ರಗಳಲ್ಲೂ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದರು. ಮುಂಗಾರುಮಳೆ 2 ಚಿತ್ರದಲ್ಲಿ ನಿರ್ದೇಶಕ ಶಶಾಂಕ್ ಅವರೊಂದಿಗೆ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ಅವರ ನಿರ್ದೇಶನದಲ್ಲಿ ಈ ಸಿನಿಮಾ ಸದ್ದಿಲ್ಲದೆ ಶೂಟಿಂಗ್ ಕೂಡ ಪೂರ್ಣಗೊಳಿಸಿದೆ.

ಇನ್ನೇನು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ಸಿನಿಮಾದ ಶೀರ್ಷಿಕೆಯನ್ನು ನಟ ರಿಷಿ ಬುಧವಾರ ಬಿಡುಗಡೆಗೊಳಿಸಿದರು. ಶೀರ್ಷಿಕೆಯ ಕುರಿತ 40 ಸೆಕೆಂಡ್ ವಿಡಿಯೊವೊಂದನ್ನು ಚಿತ್ರತಂಡ ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ತಮಿಳಿನ ಪ್ರಖ್ಯಾತ ನಟ ಆಡುಕಲಂ ನರೇನ್ ನಟಿಸಿದ್ದಾರೆ. ಸಿದ್ದಾರ್ಥ್ ಮಾಧ್ಯಮಿಕ ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಪಾತ್ರಗಳ ಬಗ್ಗೆ ಸಿನಿಮಾ ತಂಡ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

"ನಿರ್ದೇಶಕನಾಗಿ ಇದು ನನಗೆ ಚೊಚ್ಚಲ ಚಿತ್ರ. ಸಿನಿಮಾದ ಕಥೆ ವಿಭಿನ್ನವಾಗಿದೆ. ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಸಾಕಷ್ಟು ತಿರುವುಗಳು ನೋಡಲು ಸಿಗಲಿವೆ. ಚಿತ್ರದ ಒಂದೊಂದು ದೃಶ್ಯವನ್ನೂ ಬಹಳ ಕಾಳಜಿ ಹಾಗೂ ಸಂಯಮದಿಂದ ಚಿತ್ರೀಕರಿಸಲಾಗಿದೆ. ಆದ್ದರಿಂದ ಶೂಟಿಂಗ್ ಮುಗಿಯುವವರೆಗೂ ನಾವು ಸಿನಿಮಾ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಥ್ರಿಲ್ಲರ್ ಚಿತ್ರಗಳ ಸಾಲಿನಲ್ಲಿ ನಮ್ಮ‌‌ ಸಿನಿಮಾ ಉದಾಹರಣೆಯಾಗಿ ನಿಲ್ಲುವ ನಂಬಿಕೆ ನಮ್ಮ ತಂಡಕ್ಕಿದೆ' ಎಂದು ನಿರ್ದೇಶಕ ಪ್ರಶಾಂತ್ ಚಂದ್ರ ಹೇಳುತ್ತಾರೆ.

ಪೋಸ್ಟರ್ ಬಿಡುಗಡೆ
'#ಮ್ಯೂಟ್' ಶೀರ್ಷಿಕೆಯ ಪೋಸ್ಟರ್ ಬಿಡುಗಡೆ ಮಾಡಲು ಖುಷಿಯಾಗುತ್ತಿದೆ. ಇದರಲ್ಲಿ ಅದ್ಬುತ ನಟರು ಅಭಿನಯಿಸಿದ್ದಾರೆ. ಪ್ರತಿಭಾವಂತ ಪ್ರಶಾಂತ್ ಚಂದ್ರ ಅವರ ನಿರ್ದೇಶನದ ಈ ಸಿನಿಮಾಗೆ ಯಶಸ್ಸು ಸಿಗಲಿ' ಎಂದು ನಟ ರಿಷಿ ತಂಡಕ್ಕೆ ಹಾರೈಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT