ಸಿನಿಮಾ ಸುದ್ದಿ

ಕರೆಯದೆ ಬಂದ ಈ ಅತಿಥಿಯನ್ನು ಹೊರಗೆ ಹಾಕಲು ಹೋರಾಡುತ್ತಿದ್ದೇನೆ: ಲೂಸಿಯಾ ನಿರ್ದೇಶಕ ಪವನ್ ಕುಮಾರ್‌!

Shilpa D

ದ್ವಿತ್ವ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ನಿರ್ದೇಶಕ ಪವನ್ ಕುಮಾರ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಲೂಸಿಯಾ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಎಕ್ಸ್ ರೇ ಫೋಟೋ ಪೋಸ್ಟ್ ಮಾಡಿರುವ ಪವನ್ ಕೊರೋನಾ ದೃಢಪಟ್ಟಿರುವ ಮಾಹಿತಿ ನೀಡಿದ್ದಾರೆ. ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನನ್ನ ಸುಂದರ ಶ್ವಾಸಕೋಶದ ಚಿತ್ರವಿದು. ಈಗ ನನ್ನ ಶ್ವಾಸಕೋಶಕ್ಕೆ ಆಹ್ವಾನಿಸದೆ ಬಂದ ಅತಿಥಿ ಸೇರಿಕೊಂಡುಬಿಟ್ಟಿದೆ. ಕರೆಯದೆ ಬಂದ ಈ ಅತಿಥಿಯನ್ನು ಹೊರಗೆ ಹಾಕಲು ನಾನು ಮತ್ತು ನನ್ನ ಶ್ವಾಸಕೋಶ ಹೋರಾಡುತ್ತಿದ್ದೇವೆ. ಈ ಯುದ್ಧಕ್ಕೆ 14 ದಿನಗಳಲ್ಲಿ ತೆರೆಬೀಳಲಿದೆ. ಇದರ ಹೊರತಾಗಿ ನಾನು ಆರಾಮಾಗಿದ್ದೇನೆ. ರೂಮ್‌ನಲ್ಲಿ ಲಾಕ್‌ ಆಗಿದ್ದೇನೆ. ಬಹುತೇಕ ಕಾಲ ನಿದ್ರಿಸುತ್ತಿದ್ದೇನೆ. ನನ್ನನ್ನ ನನ್ನ ಪತ್ನಿ ಸೌಮ್ಯ ಆರೈಕೆ ಮಾಡುತ್ತಿದ್ದಾರೆ'' ಎಂದು ಪವನ್ ಕುಮಾರ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. 

SCROLL FOR NEXT