ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸು: ಮಾಡೆಲ್ ಸೋನಿಯಾ ಅಗರ್ವಾಲ್, ಡಿಜೆ ವಚನ್ ಚಿನ್ನಪ್ಪ ವಶಕ್ಕೆ 

Sumana Upadhyaya

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲದ ನಂಟಿನ ಜಾಡು ಹಿಡಿದು ಹೊರಟಿರುವ ಪೊಲೀಸರು ಸೋಮವಾರ ಮಾಡೆಲ್ ಸೋನಿಯಾ ಅಗರ್ವಾಲ್ , ಡಿಜೆ ವಚನ್ ಚಿನ್ನಪ್ಪ ಮತ್ತು ಉದ್ಯಮಿ ಭರತ್ ನನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಕೆ ಜಿ ಹಳ್ಳಿ ಪೊಲೀಸರ ನೆರವಿನೊಂದಿಗೆ ಈ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಇಂದು ಬೆಳಗ್ಗೆಯೇ ಹಠಾತ್ ದಾಳಿ ನಡೆಸಿದ ವೇಳೆ ಡಿಜೆ ವಚನ್ ಮನೆಯಲ್ಲಿ 50 ಗ್ರಾಂ ಮಾದಕ ವಸ್ತು, ರಾಜಾಜಿನಗರದ ಸೋನಿಯಾ ಅಗರ್ವಾಲ್ ನಿವಾಸದಲ್ಲಿ 40 ಗ್ರಾಂ ಗಾಂಜಾ ಪತ್ತೆಯಾಗಿತ್ತು.

ಆರಂಭದಲ್ಲಿ ಮಾಡೆಲ್ ಸೋನಿಯಾ ಅಗರ್ವಾಲ್ ಪೊಲೀಸರಿಗೆ ಸಿಕ್ಕಿರಲಿಲ್ಲ. ವಿಚಾರಣೆ ನಡೆಸಿದಾಗ ಆಕೆ ವಾಶ್ ರೂಂನಲ್ಲಿ ಬಚ್ಚಿಟ್ಟುಕೊಂಡಿರುವುದು ತಿಳಿದುಬಂತು. ಆಕೆಯ ತಂದೆಯ ಮೂಲಕ ಸೋನಿಯಾಳನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ.

ಇವರಿಗೆ ಉದ್ಯಮಿ ಭರತ್ ಮಾದಕ ವಸ್ತು ಪೂರೈಸುತ್ತಿದ್ದ, ಆತನ ಮೂಲಕ ಇವರೆಲ್ಲ ಅಪಾರ್ಟ್ ಮೆಂಟ್ ಗಳಲ್ಲಿ ರಾತ್ರಿ ಹೊತ್ತು ಪಾರ್ಟಿ ಮಾಡಿ ಮಾದಕ ವಸ್ತು ಸೇವನೆ ಮಾಡುತ್ತಿದ್ದರು. ಮೋಜು-ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

SCROLL FOR NEXT