ಪ್ರಜ್ವಲ್ ದೇವರಾಜ್ 
ಸಿನಿಮಾ ಸುದ್ದಿ

ಕೊನೆಗೂ ಹೇರ್ ಕಟ್ ಮಾಡಿಸಿದ ಪ್ರಜ್ವಲ್ ದೇವರಾಜ್‌: ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ 'ಡೈನಾಮಿಕ್ ಪ್ರಿನ್ಸ್'

ಕಳೆದ ಎರಡು ವರ್ಷಗಳಿಂದ ಹೇರ್ ಕಟ್ ಮಾಡಿಸಿರದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೊನೆಗೂ ಹೇರ್ ಕಟ್ ಮಾಡಿಸಿದ್ದಾರೆ.

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಹೇರ್ ಕಟ್ ಮಾಡಿಸಿರದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೊನೆಗೂ ಹೇರ್ ಕಟ್ ಮಾಡಿಸಿದ್ದಾರೆ.

ನಾಯಕನಾಗಿ ನಟಿಸುತ್ತಿರುವ 35 ನೇ ಚಿತ್ರ "ಮಾಫಿಯಾ" ಚಿತ್ರಕ್ಕಾಗಿ ಎರಡು ವರ್ಷಗಳಿಂದ ಪ್ರಜ್ವಲ್ ದೇವರಾಜ್ ದಟ್ಟವಾಗಿ ತಲೆಗೂದಲು ಬೆಳೆಸಿದ್ದರು. ಆದರೆ ಈಗ ‘ಮಾಫಿಯಾ’ ಚಿತ್ರಕ್ಕಾಗಿ ಅವರು ಗೆಟಪ್​ ಚೇಂಜ್​ ಆಗುತ್ತಿದೆ. ಹಾಗಾಗಿ ಹೇರ್​ ಕಟ್​ ಮಾಡಿಸಿದ್ದಾರೆ. ವಿಶೇಷ ಎಂದರೆ, ತಮ್ಮ ಕೂದಲನ್ನು ಅವರು ಕ್ಯಾನ್ಸರ್​ ರೋಗಿಗಳಿಗಾಗಿ ದಾನ ಮಾಡಿದ್ದಾರೆ. ಆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.

ಕ್ಯಾನ್ಸರ್​ ರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಕೂದಲು ಉದುರುತ್ತದೆ. ಅಂತವರಿಗೆ ಸಹಾಯ ಆಗಲಿ ಎಂದು ಅನೇಕರು ಕೂದಲು ದಾನ ಮಾಡುತ್ತಾರೆ. ‘ಪೊಗರು’ ಶೂಟಿಂಗ್​ ಮುಗಿದ ಬಳಿಕ ನಟ ಧ್ರುವ ಸರ್ಜಾ ಕೂಡ ಕೂದಲು ದಾನ ಮಾಡಿದ್ದರು.

ಪ್ರಜ್ವಲ್​ ದೇವರಾಜ್​ ನಟಿಸುತ್ತಿರುವ 35ನೇ ಚಿತ್ರವಾಗಿ ‘ಮಾಫಿಯಾ’ ಮೂಡಿಬರಲಿದೆ. ಡಿ.2ರಂದು ಈ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಶೂಟಿಂಗ್​ ಆರಂಭಿಸಲು ನಿರ್ದೇಶಕ ಲೋಹಿತ್​ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಡಿ.6ರಿಂದ ಚಿತ್ರೀಕರಣ ಶುರು ಆಗಲಿದೆ. ಪ್ರಜ್ವಲ್​ ದೇವರಾಜ್​ ಅವರಿಗೆ ಜೋಡಿಯಾಗಿ ಕನ್ನಡದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ಅವರು ನಟಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT