ಸಮಂತಾ ಡ್ಯಾನ್ಸ್ ನಂಬರ್ ಗೆ ಪುರುಷರ ಸಂಘ ಆಕ್ಷೇಪ: 'ಪುಷ್ಪ' ಸಿನಿಮಾದ ಡ್ಯಾನ್ ನಂಬರ್ ನಿಷೇಧಿಸುವಂತೆ ಪ್ರಕರಣ ದಾಖಲು
ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ 'ಓ ಅಂತವಾ' ಹಾಡಿನಲ್ಲಿ ಪುರುಷರು ಎಂದರೆ ಕೇವಲ ಕಾಮದ ಹಿಂದೆ ಬೀಳುವವರು ಎನ್ನುವ ಅರ್ಥದ ಸಾಲುಗಳಿವೆ ಎನ್ನುವ ಆರೋಪ ಕೇಳಿಬಂದಿತ್ತು.
ಹೈದರಾಬಾದ್: ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ- ದಿ ರೈಸ್' ತೆಲುಗು ಸಿನಿಮಾದಲ್ಲಿನ ಡ್ಯಾನ್ ನಂಬರ್ ವಿವಾದಕ್ಕೆ ಗುರಿಯಾಗಿದೆ. ನಟಿ ಸಮಂತಾ ಹೆಜ್ಜೆ ಹಾಕಿದ್ದ ಈ ಡ್ಯಾನ್ಸ್ ನಂಬರ್ ವಿರುದ್ಧ ಪುರುಷರ ಸಂಘ ಕೋರ್ಟ್ ಮೆಟ್ಟಿಲೇರಿದೆ.
ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ 'ಓ ಅಂತವಾ' ಹಾಡಿನಲ್ಲಿ ಪುರುಷರು ಎಂದರೆ ಕೇವಲ ಕಾಮದ ಹಿಂದೆ ಬೀಳುವವರು ಎನ್ನುವ ಅರ್ಥದ ಸಾಲುಗಳಿವೆ ಎನ್ನುವ ಆರೋಪ ಕೇಳಿಬಂದಿತ್ತು. ಪುರುಷರಿಗೆ ಅವಹೇಳನ ಉಂಟುಮಾಡುವ ಈ ಹಾಡನ್ನು ನಿಷೇಧಿಸುವಂತೆ ಕೋರಿ ಆಂಧ್ರ ಪುರುಷರ ಸಂಘ ನ್ಯಾಯಾಲಯದ ಮೆಟ್ಟಿಲೇರಿದೆ.
ನಟಿ ಸಮಂತಾ ಇತ್ತೀಚಿಗಷ್ಟೆ ತಾವು ಪತಿ ನಾಗಚೈತನ್ಯರಿಂದ ದೂರವಾಗುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಈ ತಾರಾದಂಪತಿಯ ವಿಚ್ಚೇದನ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಅದರ ಬೆನ್ನಲ್ಲೇ ಸಮಂತಾ ನಟಿಸಿದ ಹಾಡು ವಿವಾದಕ್ಕೆ ಕಾರಣವಾಗಿರುವುದು ವಿಪರ್ಯಾಸ.
Related Article
ತೆಲುಗು ನಟಿಯ ಮೇಲೆ ಅಪರಿಚಿತನಿಂದ ಹಲ್ಲೆ: ಮೊಬೈಲ್ ಕಸಿದು ಪರಾರಿ
ನಂದಮೂರಿ ಬಾಲಕೃಷ್ಣ ಜೊತೆ ತೆಲುಗು ಸಿನಿಮಾ: ಟಾಲಿವುಡ್ ಗೆ ದುನಿಯಾ ವಿಜಯ್ ಪಾದಾರ್ಪಣೆ
ಕಿಸ್, ಭರಾಟೆಯಲ್ಲಿ ಮಿಂಚಿದ್ದ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ
ಹೈದರಾಬಾದ್: ತೆಲುಗು ನಟಿ ಅನುರಾಧಾ ಆತ್ಮಹತ್ಯೆಗೆ ಶರಣು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.