ಸಲ್ಮಾನ್ ಖಾನ್ ಮತ್ತು ಚಿರಂಜೀವಿ 
ಸಿನಿಮಾ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಗಾಡ್ ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್: ಫೆಬ್ರವರಿಯಲ್ಲಿ ಶೂಟಿಂಗ್

ಬಾಲಿವುಡ್ ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸ್ಟಾರ್ ಹೀರೋ ಸಲ್ಮಾನ್ ಖಾನ್ ನೇರವಾಗಿ ತೆಲುಗು ಸಿನಿಮಾವೊಂದರಲ್ಲಿ ನಟಿಸಲು ಹಸಿರು ನಿಶಾನೆ ತೋರಿಸಿದ್ದಾರೆ.

ಹೈದರಾಬಾದ್‌: ಬಾಲಿವುಡ್ ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸ್ಟಾರ್ ಹೀರೋ ಸಲ್ಮಾನ್ ಖಾನ್ ನೇರವಾಗಿ ತೆಲುಗು ಸಿನಿಮಾವೊಂದರಲ್ಲಿ ನಟಿಸಲು ಹಸಿರು ನಿಶಾನೆ ತೋರಿಸಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ ಮೋಹನ್ ರಾಜಾ ನಿರ್ದೇಶನದಲ್ಲಿ ಮೂಡಿಬರಲಿರುವ ‘ಗಾಡ್ ಫಾದರ್’ ಚಿತ್ರದಲ್ಲಿ ಸಲ್ಮಾನ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಮೋಹನ್ ಲಾಲ್ ಅಭಿನಯದ ಮಲಯಾಳಂ ‘ಲೂಸಿಫರ್’ ಚಿತ್ರದ ರಿಮೇಕ್ ಆಗಿ ‘ಗಾಡ್ ಫಾದರ್’ ನಿರ್ಮಾಣಗೊಳ್ಳಲಿದೆ.

ತೆಲುಗಿನ ‘ಲೂಸಿಫರ್’ ಚಿತ್ರದಲ್ಲಿ ಪೃಥ್ವಿರಾಜ್ ನಿರ್ವಹಿಸಿದ್ದ ಪ್ರಮುಖ ಪಾತ್ರವನ್ನು ಸಲ್ಮಾನ್ ನಿಭಾಯಿಸಲಿದ್ದಾರೆ. ‘ಫೈನಲ್’ ಪ್ರಮೋಷನ್ಸ್ ಭಾಗವಾಗಿ ಇತ್ತೀಚಿಗೆ ಹೈದರಾಬಾದ್ ಗೆ ಬಂದಿದ್ದ ಸಲ್ಮಾನ್‌ ಖಾನ್‌ ‘ಗಾಡ್ ಫಾದರ್’ ಚಿತ್ರದಲ್ಲಿ ನಟಿಸಲಿರುವುದಾಗಿ ಸ್ಪಷ್ಟಪಡಿಸಿದ್ದರು. ಫೆಬ್ರವರಿಯಲ್ಲಿ ಈ ಸಿನಿಮಾ ಶೂಟಿಂಗ್‌ ನಲ್ಲಿ ಸಲ್ಮಾನ್‌ ಪಾಲ್ಗೊಳ್ಳಲಿದ್ದಾರೆ.

ಚಿರಂಜೀವಿ ಜೊತೆಗೆ ವಿಕ್ಟರಿ ವೆಂಕಟೇಶ್ ಅವರೊಂದಿಗೆ ಸಿನಿಮಾ ಮಾಡುವುದಾಗಿ ಸಲ್ಮಾನ್ ಖಾನ್ ಘೋಷಿಸಿದ್ದಾರೆ. ಆದರೆ, ಆ ಚಿತ್ರದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಸ್ನೇಹಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಾಲಿವುಡ್ ಭಾಯಿಜಾನ್, ಲೆಕ್ಕವಿಲ್ಲದಷ್ಟು ಬಾರಿ ಇತರ ನಾಯಕರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅವರು ಪ್ರಸ್ತುತ ಬಾಲಿವುಡ್ ಬಾದ್‌ಶಾ ಶಾರುಖ್ ಅಭಿನಯದ ‘ಪಠಾಣ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಜೊತೆಗೆ ಮಿಸ್ಟರ್ ಪರ್ಫೆಕ್ಟ್ ‘ಅಮೀರ್ ಖಾನ್ ಅವರ ಹೊಸ ಚಿತ್ರ’ ಲಾಲ್ ಸಿಂಗ್ ಚಡ್ಡಾ’ ನಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ