ಸಿನಿಮಾ ಸುದ್ದಿ

ಬೇರೆ ಬೇರೆ ಚಿತ್ರರಂಗದ ಕಲಾವಿದರನ್ನು ಹಾಕಿಕೊಳ್ಳುವುದರಿಂದ ಪ್ಯಾನ್ ಇಂಡಿಯಾ ಸಿನಿಮಾ ಆಗೋದಿಲ್ಲ: RRR ನಿರ್ದೇಶಕ ರಾಜಮೌಳಿ

Harshavardhan M

ಹೈದರಾಬಾದ್: ಬಾಹುಬಲಿ ಸಿನಿಮಾ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಚಿತ್ರ ನಿರ್ದೇಶಕ ರಾಜಮೌಳಿ. ಅವರ ಪ್ರಕಾರ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಬೇರೆ ಬೇರೆ ಚಿತ್ರರಂಗದ ನಟರನ್ನು ಸಿನಿಮಾದಲ್ಲಿ ಹಾಕಿಕೊಳ್ಳುವುದಲ್ಲ. ಯಾವುದೇ ಭಾಷೆಯ ಜನರಿಗೆ ಕನೆಕ್ಟ್ ಆಗುವ ಕಥೆಯೇ ಸಿನಿಮಾದ ಜೀವಾಳ ಎನ್ನುವುದು ಅವರ ಅಭಿಪ್ರಾಯ.

ಯಾವುದೇ ದೃಶ್ಯ ತೆರೆ ಮೇಲೆ ಬರುವಾಗ ಅದರ ಸೌಂಡನ್ನು ಆಫ್ ಮಾಡಿದರೆ ಪರಭಾಷೆಯ ಜನರು ಕಥೆಯನ್ನು ಅರ್ಥ ಮಾಡಿಕೊಳ್ಳುವರೇ ಎಂದು ನಾನು ಚಿಂತಿಸುತ್ತೇನೆ. ಸೌಂಡ್ ಆಫ್ ಮಾಡಿದರೂ ಕಥೆ ಅರ್ಥ ಮಾಡಿಕೊಳ್ಲಬಲ್ಲರು ಅಂದರೆ ಮಾತ್ರ ಅದು ಯಶಸ್ವಿ ಪ್ಯಾನ್ ಇಂಡಿಯಾ ಸಿನಿಮಾ.

ಬಾಹುಬಲಿ ಸಿನಿಮಾ ತೆರೆಕಂಡು 5 ವರ್ಷಗಳ ನಂತರ ಅವರ ಹೊಸ ಸಿನಿಮಾ ಆರ್ ಆರ್ ಆರ್ ಬಿಡುಗಡೆಗೆ ಸಿದ್ಧವಾಗಿದೆ. ತೆಲುಗು ಸ್ಟಾರ್ ನಟರಾದ ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮ ಕಥೆಯನ್ನು ಹೊಂದಿರುವ ಈ ಸಿನಿಮಾ ಈಗಾಗಲೇ ಸದ್ದು ಮಾಡಿದ್ದು, ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಸ್ಟಾರ್ ನಟರು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಾರೆ, ಆದರೆ ಸಿನಿಮಾ ಹಿಟ್ ಆಗೋದು ಕಥೆಯಿಂದ ಎಂದು ರಾಜಮೌಳಿ ಆತ್ಮವಿಶ್ವಾಸದಿಂದ ಹೇಳುತ್ತಾರೆ.

SCROLL FOR NEXT