ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭರವಸೆ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೀ ಮಹಾದೇವ್ ಹಾಗೂ ನಟಿ ಅದಿತಿ ಪ್ರಭುದೇವ ನಟನೆಯ ‘ಗಜಾನನ and ಗ್ಯಾಂಗ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿ 4ರಂದು ಬೆಳ್ಳಿತೆರೆಗೆ ಗಜಾನನ and ಗ್ಯಾಂಗ್ ಸಿನಿಮಾ ಎಂಟ್ರಿ ಕೊಡ್ತಿದೆ.
ಟ್ರೇಲರ್ ಹಾಗೂ ಸಾಂಗ್ ಮೂಲಕ ಗಜಾನನ and ಗ್ಯಾಂಗ್ ಸಿನಿಮಾ ಕ್ಯೂರಿಯಾಸಿಟಿ ಹುಟ್ಟಿಸಿತ್ತು. 'ನಮ್ ಗಣಿ ಬಿಕಾಂ ಪಾಸ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ ‘ಗಜಾನನ and ಗ್ಯಾಂಗ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: 'ಅರ್ಜುನ್ ಗೌಡ' ಸಿನಿಮಾವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರೆದುರು ತರುವ ರಾಮು ಆಸೆಯನ್ನು ನಾನು ಪೂರೈಸುವೆ: ಮಾಲಾಶ್ರೀ
'ಗಜಾನನ and ಗ್ಯಾಂಗ್' ಟೈಟಲೇ ಹೇಳುವಂತೆ ಕಾಲೇಜ್ ಕಥೆಯಾಧಾರಿತ ಸಿನಿಮಾ. ಕಾಮಿಡಿ, ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ಶ್ರೀ ಮಹಾದೇವ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗಜ ಎಂಬ ಪಾತ್ರದಲ್ಲಿ ಶ್ರೀ ನಟಿಸಿದ್ರೆ, ಅದಿತಿ ಪ್ರಭುದೇವ ಮಿಡಲ್ ಕ್ಲಾಸ್ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಿರ್ದೇಶಕರು ನನ್ನನ್ನು ವಿಭಿನ್ನ ಪಾತ್ರಗಳಲ್ಲಿ ನೋಡಲು ಇಷ್ಟಪಡುತ್ತಿರುವುದು ಸಂತಸ ನೀಡಿದೆ: ದಿಗಂತ್ 'ಹುಟ್ಟುಹಬ್ಬದ ಶುಭಾಶಯಗಳು'
ನಿರ್ಮಾಪಕ ಯು ಎಸ್ ನಾಗೇಶ್ ಕುಮಾರ್ 'ಗಜಾನನ and ಗ್ಯಾಂಗ್' ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಪ್ರದ್ಯುತನ್ ಸಂಗೀತ. ಉದಯ ಲೀಲಾ ಸಿನಿಮೆಟೊಗ್ರಫಿ, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಉಳಿದಂತೆ ಬಿಗ್ ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯ ರಂಗ, ಅಶ್ವಿನ್ ಹಾಸನ್ ಹಾಗೂ ಶಮಂತ್ ಊರೂಫ್ ಬ್ರೋ ಗೌಡ ಮತ್ತಿತರರು ತಾರಾಗಣದಲ್ಲಿದ್ದಾರೆ.