ಕೆಜಿಎಫ್ 2 ಲಹರಿ ಮ್ಯೂಸಿಕ್ 
ಸಿನಿಮಾ ಸುದ್ದಿ

‘ಕೆ.ಜಿ.ಎಫ್ 2’ ಆಡಿಯೋ ಹಕ್ಕು ಲಹರಿ ತೆಕ್ಕೆಗೆ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯ್ ಕಿರಂಗದೂರು ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ 2 ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯ್ ಕಿರಂಗದೂರು ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ 2 ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

ಖ್ಯಾತ ಮ್ಯೂಸಿಕ್ ಸಂಸ್ಥೆ ಲಹರಿ ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದಾರೆ.‌ ಹಲವು ಭಾಷೆಗಳಲ್ಲಿ ಕೆ.ಜಿ.ಎಫ್ 2 ಚಿತ್ರ ನಿರ್ಮಾಣವಾಗಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. 

ಕೆಜಿಎಫ್-2 ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಈ ಹಿಂದೆ ಕೆಜಿಎಫ್ ಚಾಪ್ಟರ್-1ರ ಹಾಡುಗಳ ಹಕ್ಕನ್ನೂ ಸಹ ಲಹರಿ ಸಂಸ್ಥೆಯೇ ಖರೀದಿಸಿತ್ತು.

ಕೆಲವೇ ದಿನಗಳಲ್ಲಿ ಚಿತ್ರದ ಹಾಡುಗಳು ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ. ಇನ್ನು ಇದೇ ಜುಲೈ 16ಕ್ಕೆ ಚಿತ್ರಮಂದಿರಗಳಲ್ಲಿ  ಕೆ.ಜಿ.ಎಫ್ 2 ತೆರೆ ಕಾಣಲಿದೆ ಎನ್ನಲಾಗಿತ್ತು. ಆದರೆ ಕೊರೋನಾ ಅಲೆ ಕಾರಣ ಸ್ಥಗಿತಗೊಂಡ ಚಿತ್ರಮಂದಿರಗಳಿನ್ನೂ ಕಾರ್ಯಾರಂಬ ಮಾಡಿಲ್ಲದ ಕಾರಣ ಮತ್ತೆ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುವ ಸಂಭವವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ