ನಿರ್ಮಾಪಕ ಉಮಾಪತಿ ಗೌಡ 
ಸಿನಿಮಾ ಸುದ್ದಿ

ನನ್ನ ಚಾರಿತ್ರ್ಯವಧೆಗೆ ಯತ್ನಿಸಲಾಗುತ್ತಿದೆ: ನಟ ದರ್ಶನ್ ಸ್ನೇಹಿತರ ಮೇಲೆ ನಿರ್ಮಾಪಕ ಉಮಾಪತಿ ಆರೋಪ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮಂಗಳವಾರ ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತಮ್ಮ ಮೇಲಿನ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮಂಗಳವಾರ ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತಮ್ಮ ಮೇಲಿನ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಈ ಪ್ರಕರಣದಲ್ಲಿ ದರ್ಶನ್ ಅವರ ಮೇಲಿನ ಪ್ರೀತಿ, ಅಭಿಮಾನದಿಂದ ಭಾಗಿಯಾದೇ ಹೊರತು ಇದಕ್ಕೂ ನನಗೂ ಸಂಬಂಧವೇ ಇಲ್ಲ, ಪ್ರಕರಣ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ವಿಷಯ ಏನೆಂದು ಗೊತ್ತಾಗಲಿದೆ, ಈಗಲೇ ಅನುಮಾನ, ಹೇಳಿಕೆಗಳು, ತರಾತುರಿಯ ಮಾತುಗಳು, ಆರೋಪಗಳು ಏಕೆ ಎಂದು ಉಮಾಪತಿ ಗೌಡ ಕೇಳಿದರು.

ಅರುಣಾ ಕುಮಾರಿ ನನಗೆ ಏಪ್ರಿಲ್​ನಿಂದ ಸಂಪರ್ಕದಲ್ಲಿದ್ದರು. ಸೀಸ್ ಆಗಿರುವ ಪ್ರಾಪರ್ಟಿ ಖರೀದಿ ಸಂಬಂಧ ಸಂಪರ್ಕ. ಬಳಿಕ ದರ್ಶನ್​ ವಿಚಾರ ಪ್ರಸ್ತಾಪ ಮಾಡಿದರು ಲೋನ್​ಗೆ ಏನಾದರೂ ಶ್ಯೂರಿಟಿ ಹಾಕ್ತಿದ್ದೀರಾ ಎಂದಿದ್ದರು. ಬಳಿಕ ದರ್ಶನ್ ಏನಾದರೂ ಶ್ಯೂರಿಟಿ ಹಾಕ್ತಿದ್ದೀರಾ ಎಂದಿದ್ದರು. ನಾನು ಇಬ್ಬರೂ ಶ್ಯೂರಿಟಿ ಹಾಕಿಲ್ಲ ಎಂದು ಹೇಳಿದ್ದೆ. ದರ್ಶನ್​ ಯಾವುದೇ ರಿಯಾಕ್ಟ್ ಮಾಡಬೇಡಿ ಎಂದಿದ್ದರು. ನಾನು ಆಡಿಯೋದಲ್ಲಿ ಯಾವುದೇ ಅಶ್ಲೀಲ ಪದ ಬಳಸಿಲ್ಲ. ದರ್ಶನ್​ ಸರ್​ ಕೇಳಿ ನಾನು ಆಧಾರ್ ಕಾರ್ಡ್ ಕಳಿಸಿದ್ದೆ. ನಾನಾಗಲಿ, ಆಕೆಯಾಗಲಿ ಅಶ್ಲೀಲವಾಗಿ ಮಾತನಾಡಿಲ್ಲ. ನನ್ನ ಮೇಲಿನ ಆರೋಪ ಬಂದ ಬಳಿಕ ಸಾಬೀತುಪಡಿಸಬೇಕು ಎಂದು ಉಮಾಪತಿ ಹೇಳಿದರು.

ದರ್ಶನ್ ಸರ್ ಅವರು ನನ್ನ ಹೆಸರನ್ನು ಇಲ್ಲಿ ಹೇಳುತ್ತಿಲ್ಲ, ನಾನೇ ಮಾಡಿಸಿದ್ದು ಎಂದು ಆರೋಪ ಮಾಡಿಲ್ಲ, ಅವರು ನನ್ನ ಬಗ್ಗೆ ಪ್ರೀತಿ, ಮರ್ಯಾದೆ ಇಟ್ಟುಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡುವಾಗಲೂ ನನ್ನನ್ನು ಕೇಳಿಯೇ ನೀಡಿದ್ದಾರೆ. ಅವರ ಸುತ್ತಮುತ್ತಲಿರುವವರು, ಅವರ ಸ್ನೇಹಿತರು ನನ್ನ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ.

ನನಗೆ ಚಿತ್ರರಂಗದ ಮೇಲೆ ಗೌರವವಿದೆ, 25 ಕೋಟಿ ರೂಪಾಯಿಗೆ ನಾನು ದರ್ಶನ್ ಸರ್ ಅವರ ಪ್ರೀತಿ, ವಿಶ್ವಾಸವನ್ನು ಕಳೆದುಕೊಳ್ಳುವ ಕೆಲಸ ಏಕೆ ಮಾಡಲಿ, ಅವರ ಸ್ನೇಹಿತ ಹರ್ಷ ಅವರೇ ಇದನ್ನು ಏಕೆ ಮಾಡಿಸಿರಬಾರದು, ನನ್ನನ್ನು ಎಲ್ಲರೂ ಸೇರಿ ಈ ಪ್ರಕರಣದಲ್ಲಿ ಗುರಿಯಾಗಿಸಿರುತ್ತಾರೆ, ಹರ್ಷ ಮೆಲಂಟ್ ಅವರೇ ಮಾಡಿಸಿರಲೂಬಹುದು ಎಂದು ಆರೋಪಿಸಿದ್ದಾರೆ.

ದರ್ಶನ್ ಅವರ ಸ್ನೇಹಿತ ಹರ್ಷ ಮೆಲಂಟ್ ಅವರಿಗೆ ಮೈಸೂರಿನಲ್ಲಿ ಪೊಲೀಸರನ್ನೇ ನಿಯಂತ್ರಿಸುವಷ್ಟು ಸಾಮರ್ಥ್ಯವಿದೆ, ಇಲ್ಲಿ ನನ್ನ ಮೇಲೆ ಸುಮ್ಮನೆ ವೃಥಾ ಆರೋಪ ಮಾಡುವ ಬದಲು ಯೋಚನೆ ಮಾಡಬೇಕು, ನಾನು ನನ್ನ ಕೆಲಸ, ನನ್ನ ಕುಟುಂಬ ಎಂದು ಇರುತ್ತೇನೆ ಎಂದರು.

ನಾನೇನು ದಡ್ಡ, ನೀವು ಹೇಗೆ ಎಡವಿದಿರಿ, 25 ಕೋಟಿ ರೂಪಾಯಿ ಶ್ಯೂರಿಟಿ ಹಾಕಲು ಹೋದಿರಿ, ಮಲ್ಲೇಶ್ ಎಂದು ಕೇಳುವ ಆರೋಪಿಯನ್ನು ಏಕೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ, ಪ್ರಕರಣದ ತನಿಖೆ ಮುಗಿಯುವವರೆಗೆ ಆರೋಪಿ ಸ್ಥಾನದಲ್ಲಿರುವ ಅರುಣ ಕುಮಾರಿಯನ್ನು ಹೇಗೆ ಬಿಟ್ಟಿರಿ ಎಂದು ಇಂದಿನ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿರುವ ಉಮಾಪತಿ, ದರ್ಶನ್ ಅವರ ಆಪ್ತರ ವಿರುದ್ಧ ಆರೋಪಗಳ, ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video